ಹಿರಿಯ ಕಾಶ್ಮೀರಿ ಪತ್ರಕರ್ತ ಜೀಲಾನಿ ಬಂಧನ, ಬಿಡುಗಡೆ

Update: 2019-06-26 16:57 GMT

  ಶ್ರೀನಗರ,ಜೂ.26: ಜಮ್ಮು ಕಾಶ್ಮೀರ ಪೊಲೀಸರು ಹಿರಿಯ ಕಾಶ್ಮೀರಿ ಪತ್ರಕರ್ತ ಹಾಗೂ ಸಂಪಾದಕ ಗುಲಾಂ ಜೀಲಾನಿ ಖಾದ್ರಿಯವರ ಶ್ರೀನಗರದ ನಿವಾಸದ ಮೇಲೆ ಸೋಮವಾರ ಮಧ್ಯರಾತ್ರಿ ಹಠಾತ್ ದಾಳಿ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಮಂಗವಾರ ಜೀಲಾನಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆನಂತರ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು.

  62 ವರ್ಷ ವಯಸ್ಸಿನ ಗುಲಾಂ ಜೀಲಾನಿ ಖಾದ್ರಿ ಸ್ಥಳೀಯ ಉರ್ದು ದಿನಪತ್ರಿಕೆ ಆಫಾಖ್‌ನ ಪ್ರಕಾಶಕರಾಗಿದ್ದಾರೆ.

‘‘1992ರಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಟಾಡಾ ನ್ಯಾಯಾಲಯವು ಅವರ ಬಂಧನಕ್ಕೆ ವಾರಂಟ್ ಜಾರಿಗೊಳಿಸಿತ್ತು. ಆದರೆ ಅವರು ಅದಕ್ಕೆ ಸಹಕರಿಸಿರಲಿಲ್ಲ’’ ಎಂದು ಶ್ರೀನಗರದ ಪೊಲೀಸ್ ಅಧೀಕ್ಷಕ ಹಸೀಬ್ ಉಗಲ್ ತಿಳಿಸಿದ್ದಾರೆ.

  ಮೂರು ದಶಕಗಳಷ್ಟು ಹಳೆಯದಾದ ಈ ಪ್ರಕರದಲ್ಲಿ ಎಂಟು ಮಂದಿ ಪತ್ರಕರ್ತರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಅವರಲ್ಲಿ ಮೂವರು ಈಗಾಲೇ ನಿಧನ ರಾಗಿದ್ದಾರೆ. 90ರ ದಶಕದಲ್ಲಿ ಗುಲಾಮ್ ಜಿಲಾನಿ ಅವರು ಈಗ ಸ್ಥಗಿತಗೊಂಡಿರುವ ಸುದ್ದಿಸಂಸ್ಥೆಯೊಂದನ್ನು ನಡೆಸುತ್ತಿದ್ದರು. 1992ರಲ್ಲಿ ಕಾಶ್ಮೀರದಲ್ಲಿ ಪತ್ರಿಕೆಗಳ ಪ್ರಸಾರವನ್ನು ನಿಷೇಧಿಸಿದ ಸಂದರ್ಭದಲ್ಲಿ ಆ ಸುದ್ದಿಸಂಸ್ಥೆಯು ಉಗ್ರಗಾಮಿಗಳು ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಗಳನ್ನು ಮಾಧ್ಯಮಗಳಿಗೆ ಹಂಚುತ್ತಿದಾರೆಂದು ಆರೋಪಿಸಲಾಗಿದೆ.

 1993ರಲ್ಲೇ ಈ ಆರೋಪಕ್ಕೆ ಸಂಬಂಧಿಸಿ ಗುಲಾಮ್ ಜಿಲಾನಿ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿತ್ತಾದರೂ ಅವರನ್ನು ಬಂಧಿಸಿರಲಿಲ್ಲ.

   ಜಿಲಾನಿಯವರನ್ನು ಮಧ್ಯರಾತ್ರಿಯಲ್ಲಿ ವಶಕ್ಕೆ ತೆಗೆದುಕೊಂಡ ಪೊಲೀಸರ ಕ್ರಮವನ್ನು ಅವರ ತಮ್ಮ ಮಿರಾಫ್ ಖಾದ್ರಿ ಅವರು ಖಂಡಿಸಿದ್ದಾರೆ. ಈ ಮೊದಲು ಜಿಲಾನಿ ಯವರಿಗೆ ಪೊಲೀಸರು ಎರಡು ಬಾರಿ ಅವರ ಪಾಸ್‌ಪೋರ್ಟ್‌ನ್ನು ದೃಢೀಕರಿಸಿದ್ದಾರೆ. ಹೀಗಿರುವಾಗ ಇಷ್ಟು ವರ್ಷಗಳಲ್ಲಿ ಜಿಲಾನಿಯವರು ತಲೆ ಮರೆಸಿಕೊಂಡಿದ್ದಾರೆಯೇ ಎಂದು ಅಶ್ಫಾಕ್ ‘ದಿ ವೈರ್’ ಪತ್ರಿಕೆಗೆ ನೀಡಿದ ಹೇಳಿಕೆಯೊಂದರಲ್ಲಿ ಪ್ರಶ್ನಿಸಿದ್ದಾರೆ. ಜಿಲಾನಿ ಅವರ ಬಂಧನಕ್ಕೆ ಯಾವುದೇ ಆಧಾರವಿಲ್ಲ. ಅವರು ತಲೆ ಮರೆಸಿಕೊಂಡಿರದೆ ಇರುವುದರಿಂದ ಬೆಳಗ್ಗಿನ ಹೊತ್ತಲ್ಲಿ ಅವರಿಗೆ ಠಾಣೆಗೆ ಕರೆಸಿಕೊಳ್ಳಬಹುದಿತ್ತು’’ ಎಂದು ಅಶ್ಪಾಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News