ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ಭಾರತದ ಜರ್ಸಿ ಬಣ್ಣ ಕೇಸರಿ?

Update: 2019-06-26 18:57 GMT

ಹೊಸದಿಲ್ಲಿ, ಜೂ.26: ಇಂಗ್ಲೆಂಡ್ ವಿರುದ್ಧ ಜೂ.30ರಂದು ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರು ಕೇಸರಿ ಬಣ್ಣದ ಜರ್ಸಿ ಧರಿಸಿ ಆಡಲಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲವನ್ನೂ ಕೇಸರೀಕರಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಶಾಸಕರು ಆರೋಪಿಸಿದ್ದಾರೆ.

‘‘ಭಾರತ ತಂಡದ ಜರ್ಸಿ ತ್ರಿವರ್ಣದಿಂದ ಕೂಡಿರಬೇಕು. ಇಂದು ಜರ್ಸಿಯನ್ನು ಕೇಸರಿಗೊಳಿಸಲಾಗುತ್ತಿದೆ. ನೀವು ಜರ್ಸಿಗೆ ಬಣ್ಣ ಆಯ್ಕೆ ಮಾಡಲು ಬಯಸಿದ್ದರೆ, ತ್ರಿವರ್ಣವನ್ನು ಆಯ್ಕೆ ಮಾಡಿ. ಎಲ್ಲದ್ದಕ್ಕೂ ಕೇಸರಿ ಬಣ್ಣ ಬಳಿದರೆ ಜನರು ಇದಕ್ಕೆ ವಿರೋಧ ್ಯಕ್ತಪಡಿಸುತ್ತಾರೆ’’ಎಂದು ಮುಂಬೈನ ಎಸ್ಪಿ ಶಾಸಕ ಅಬು ಆಝ್ಮಿ ಹೇಳಿದ್ದಾರೆ.

 ಅಝ್ಮಿ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ಮುಂಬೈ ಕಾಂಗ್ರೆಸ್ ಶಾಸಕ ನಸೀಂ ಖಾನ್, ಮೋದಿ ಆಡಳಿತದಲ್ಲಿ ಭಾರತವನ್ನು ಕೇಸರೀಕರಣದತ್ತ ಕೊಂಡೊಯ್ಯಲಾಗುತ್ತಿದೆ. ಇದು ದೇಶದ ಏಕತೆಗೆ ಧಕ್ಕೆಯಾಗಲಿದೆ ಎಂದರು. ‘‘ಕ್ರೀಡೆ, ಸಂಸ್ಕೃತಿ ಹಾಗೂ ಶಿಕ್ಷಣ.. ಹೀಗೆ ಎಲ್ಲದರಲ್ಲೂ ಕೇಸರಿ ರಾಜಕೀಯ ನಡೆಯುತ್ತಿರುವುದು ದುರದೃಷ್ಟಕರ. ತ್ರಿವರ್ಣಕ್ಕೆ ಮೊದಲು ಗೌರವಿಸಬೇಕುೞೞಎಂದು ಖಾನ್ ಹೇಳಿದರು. ಭಾರತೀಯ ತಂಡದ ಜರ್ಸಿ ಯಾವ ಬಣ್ಣದ್ದಾಗಿರಬೇಕು ಎನ್ನುವ ಮೂಲಕ ವಿಪಕ್ಷಗಳು ರಾಜಕೀಯ ಮಾಡುತ್ತಿವೆ. ಕೇಸರಿ ಬಣ್ಣ ಏಕಿರಬಾರದು? ಆ ಬಣ್ಣವನ್ನು ದ್ವೇಷಿಸುವುದೇಕೆ?ಬಿಜೆಪಿ ಧ್ವಜದಲ್ಲಿ ಕೇಸರಿ ಹಾಗೂ ಹಸಿರು ಬಣ್ಣವಿದೆ. ತಮ್ಮ ಜರ್ಸಿಯ ಬಣ್ಣದ ಬಗ್ಗೆ ಕ್ರಿಕೆಟಿಗರು ನಿರ್ಧರಿಸುತ್ತಾರೆ. ಇಲ್ಲಿ ವಿಪಕ್ಷಗಳಿಗೇನು ಕೆಲಸವಿದೆ? ಎಂದು ಬಿಜೆಪಿ ಶಾಸಕ ರಾಮದಾಸ ಕದಮ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News