ಕಮರಿಗೆ ಬಿದ್ದ ಬಸ್: ಪ್ರವಾಸಕ್ಕೆ ತೆರಳಿದ್ದ 11 ವಿದ್ಯಾರ್ಥಿಗಳು ಮೃತ್ಯು

Update: 2019-06-27 15:44 GMT

ಜಮ್ಮು ಕಾಶ್ಮೀರ, ಜೂ.27: ಇಲ್ಲಿನ ಪೂಂಚ್ ಜಿಲ್ಲೆಯಲ್ಲಿ ಮುಘಲ್ ರಸ್ತೆಯಲ್ಲಿ ನಡೆದ ಅಪಘಾತವೊಂದರಲ್ಲಿ ಪ್ರವಾಸಕ್ಕೆ ತೆರಳಿದ್ದ 11 ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರಲ್ಲಿ 9 ವಿದ್ಯಾರ್ಥಿನಿಯರಿದ್ದಾರೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ.

“ಶೋಪಿಯಾನ್ ಭಾಗದಲ್ಲಿ ಅಪಘಾತ ನಡೆದಿದ್ದು, ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ತನಿಖೆ ಆರಂಭವಾಗಿದೆ. ಮಕ್ಕಳೆಲ್ಲರೂ ಪೂಂಚ್ ಜಿಲ್ಲೆಗೆ ಸೇರಿದವರಾಗಿದ್ದು, ಇನ್ನೂ ಗುರುತು ಪತ್ತೆಯಾಗದ ಕಾರಣ ಯಾವುದೇ ಮೃತದೇಹಗಳನ್ನು ಇದುವರೆಗೆ ಸ್ವೀಕರಿಸಿಲ್ಲ. 11 ಮಕ್ಕಳು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ” ಎಂದು ಪೂಂಚ್ ಜಿಲ್ಲಾಧಿಕಾರಿ ರಾಹುಲ್ ಯಾದವ್ ಹೇಳಿದ್ದಾರೆ.

“ಅತಿಯಾದ ವೇಗ ಅಪಘಾತಕ್ಕೆ ಕಾರಣವಾಗಿರಬಹುದು. ಏಕೆಂದರೆ ವಾಹನವು ಡಿವೈಡರ್ ಗೆ ಢಿಕ್ಕಿ ಹೊಡೆದು ನಂತರ ಕಮರಿಗೆ ಉರುಳಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News