ವಿಶ್ವಕಪ್: ಭಾರತದ ಬೌಲಿಂಗ್ ದಾಳಿಗೆ ವಿಂಡೀಸ್ ದಿಕ್ಕಾಪಾಲು
ಮ್ಯಾಂಚೆಸ್ಟರ್, ಜೂ.27: ವೇಗದ ಬೌಲರ್ ಮುಹಮ್ಮದ್ ಶಮಿ(4-16 ) ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ ತಂಡ ಭಾರತ ವಿರುದ್ಧ ವಿಶ್ವಕಪ್‌ನ 34ನೇ ಪಂದ್ಯದಲ್ಲಿ 125 ರನ್‌ಗಳ ಅಂತರದಿಂದ ಸೋಲುಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಾಯಕ ವಿರಾಟ್ ಕೊಹ್ಲಿ ಟೂರ್ನಮೆಂಟ್‌ನಲ್ಲಿ ಗಳಿಸಿದ ಸತತ 4ನೇ ತಾಳ್ಮೆಯ ಅರ್ಧಶತಕ (72, 82 ಎಸೆತ) ಹಾಗೂ ಇನಿಂಗ್ಸ್ ಕೊನೆಯಲ್ಲಿ ಧೋನಿಯ ಅಬ್ಬರದ ಬ್ಯಾಟಿಂಗ್(ಔಟಾಗದೆ 56, 61 ಎಸೆತ) ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 268 ರನ್ ಗಳಿಸಿತು.
ವಿಂಡೀಸ್ 5ನೇ ಓವರ್‌ನಲ್ಲಿ ಆರಂಭಿಕ ಆಟಗಾರ ಕ್ರಿಸ್ ಗೇಲ್(6) ವಿಕೆಟನ್ನು ಕಳೆದುಕೊಂಡಿತು. ಆ ಬಳಿಕ ಕುಂಟುತ್ತಾ ಸಾಗಿದ ವಿಂಡೀಸ್ 34.2 ಓವರ್‌ಗಳಲ್ಲಿ 143 ರನ್ ಗಳಿಸಿ ಸರ್ವಪತನಗೊಂಡಿತು.
ವಿಂಡೀಸ್ ಪರ ಆರಂಭಿಕ ಆಟಗಾರ ಸುನೀಲ್ ಅಂಬ್ರಿಸ್(31, 40 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ನಿಕೊಲಸ್ ಪೂರನ್(28)ಹಾಗೂ• ಹೆಟ್ಮೆಯರ್(18) ಎರಡಂಕೆಯ ಸ್ಕೋರ್ ಗಳಿಸಿದರು.
ಉಳಿದವರು ಪೆವಿಲಿಯನ್‌ಗೆ ಪರೇಡ್ ನಡೆಸಿದರು. ಭಾರತದ ಪರ ಶಮಿ(4-16 ) ಅತ್ಯುತ್ತಮ ದಾಳಿ ಸಂಘಟಿಸಿದರೆ, ಜಸ್‌ಪ್ರಿತ್ ಬುಮ್ರಾ(2-9)ಹಾಗೂ ಯಜುವೇಂದ್ರ ಚಹಾಲ್(2-26)ತಲಾ ಎರಡು ವಿಕೆಟ್ ಪಡೆದು ಶಮಿಗೆ ಸಾಥ್ ನೀಡಿದರು.