ವಲಸಿಗರನ್ನು ಹಿಂದಕ್ಕೆ ಕಳುಹಿಸದಿದ್ದರೆ ಯುರೋಪ್ ‘ಮುಸ್ಲಿಂ’-‘ಆಫ್ರಿಕನ್’ ದೇಶವಾಗಲಿದೆ: ದಲಾಯ್ ಲಾಮಾ

Update: 2019-06-29 17:33 GMT

ಹೊಸದಿಲ್ಲಿ, ಜೂ.29: ವಲಸಿಗರನ್ನು ಅವರದ್ದೇ ದೇಶಕ್ಕೆ ಹಿಂದಕ್ಕೆ ಕಳುಹಿಸದಿದ್ದಲ್ಲಿ ಯುರೋಪ್ ಕ್ರಮೇಣ ಮುಸ್ಲಿಮ್ ಮತ್ತು ಆಫ್ರಿಕನ್ ಖಂಡವಾಗಲಿದೆ ಎಂದು ಬೌದ್ಧ ಧರ್ಮಗುರು ದಲಾಯ್ ಲಾಮಾ ಹೇಳಿದ್ದಾರೆ.

ಸುಮಾರು 60 ವರ್ಷಗಳ ಹಿಂದೆ 10 ಸಾವಿರ ಟಿಬೆಟಿಯನ್ನರ ಜೊತೆ ಚೀನಾದಿಂದ ಪಲಾಯನಗೈದು ಭಾರತಕ್ಕೆ ಬಂದು ಆಶ್ರಯ ಪಡೆದ, ಸ್ವತಃ ವಲಸಿಗರಾಗಿರುವ ದಲಾಯ್ ಲಾಮಾ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಲಾಮಾ, “ಯುರೋಪಿಯನ್ ದೇಶಗಳು ಈ ನಿರಾಶ್ರಿತರಿಗೆ ಶಿಕ್ಷಣ ಮತ್ತು ತರಬೇತಿ ನೀಡಬೇಕು. ಅದರಲ್ಲಿ ಅವರದ್ದೇ ಸ್ವಂತ ದೇಶಕ್ಕೆ ಹಿಂದಿರುಗುವ ತರಬೇತಿಯೂ ಒಳಗೊಂಡಿರಬೇಕು. ಕನಿಷ್ಠ ಸಂಖ್ಯೆಯಾದರೆ ಪರವಾಗಿಲ್ಲ. ಆದರೆ ಇಡೀ ಯುರೋಪ್ ಕ್ರಮೇಣ ಮುಸ್ಲಿಮ್ ದೇಶವಾಗಲಿದೆ ಅಥವಾ ಆಫ್ರಿಕನ್ ದೇಶವಾಗಲಿದೆ” ಎಂದರು.

ದಲಾಯ್ ಲಾಮಾರ ಈ ಹೇಳಿಕೆ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದು, ಇದು ‘ನಾಚಿಕೆಗೇಡು’ ಎಂದು ಹೋರಾಟಗಾರ್ತಿ ಕವಿತಾ ಕೃಷ್ಣನ್ ಹೇಳಿದ್ದಾರೆ. “60 ವರ್ಷಗಳಿಂದ ವಲಸಿಗರಾಗಿರುವ ದಲಾಯ್ ಲಾಮಾ ನಿಮ್ಮ ದೇಶಕ್ಕೆ ಯಾವಾಗ ಮರಳುತ್ತೀರಿ” ಎಂದು ಅಶೋಕ್ ಸ್ವೈನ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News