ಸೆಮಿಫೈನಲ್ ಗೇರಲು ಪಾಕ್ ಗೆ ಕಠಿಣ ಸವಾಲು

Update: 2019-07-05 03:30 GMT

ಲಂಡನ್, ಜು.4: ವಿಶ್ವಕಪ್‌ನಲ್ಲಿ ಲೀಗ್ ಹಂತದ ಪಂದ್ಯಗಳು ಮುಗಿಯುತ್ತ ಬಂದಿದ್ದು ಸ್ಪರ್ಧೆ ನಿರ್ಣಾಯಕ ಹಂತಕ್ಕೆ ತಲುಪಿದೆ.ಸೆಮಿಫೈನಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಪಾಕಿಸ್ತಾನಕ್ಕೆ ಇದೀಗ ಬೆಟ್ಟದಂತಹ ಸವಾಲು ಎದುರಾಗಿದೆ.

 ಶುಕ್ರವಾರ ಇಲ್ಲಿ ನಡೆಯಲಿರುವ ವಿಶ್ವಕಪ್‌ನ 43ನೇ ಪಂದ್ಯದಲ್ಲಿ ಸೆಮಿಫೈನಲ್ ಪ್ರವೇಶ ಪಡೆಯಲು ಪಾಕಿಸ್ತಾನ ಭಾರೀ ಅಂತರದಲ್ಲಿ ಜಯ ದಾಖಲಿಸಬೇಕಾಗಿದೆ. ಇಲ್ಲವಾದರೆ ಪಾಕಿಸ್ತಾನದ ಸೆಮಿಫೈನಲ್ ಕನಸು ಮುಗಿದಂತೆಯೇ ಸರಿ.

1992ರ ಚಾಂಪಿಯನ್ ಪಾಕ್ ತಂಡ ಭಾರತ -ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯದ ತನಕ ತನ್ನ ಅವಕಾಶವನ್ನು ಜೀವಂತವಾಗಿರಿಸಿತ್ತು. ತಾನು ಭಾರತದ ವಿರುದ್ಧ ಸೋತಿದ್ದರೂ ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲುವುದನ್ನು ಬಯಸಿತ್ತು. ಯಾಕೆಂದರೆ ಭಾರತ ಜಯಿಸಿದ್ದರೆ ಇಂಗ್ಲೆಂಡ್‌ಗೆ ಸೆಮಿಫೈನಲ್‌ನಲ್ಲಿ ಅವಕಾಶ ಸಿಗುವ ಸಾಧ್ಯತೆ ಇರಲಿಲ್ಲ. ಯಾವಾಗ ಭಾರತ ವಿರುದ್ಧ ಇಂಗ್ಲೆಂಡ್ ಜಯ ಗಳಿಸಿತೋ ಆಗ ಪಾಕ್‌ನ ಲೆಕ್ಕಾಚಾರ ತಲೆಕೆಳಗಾಯಿತು.

ಅಷ್ಟು ಮಾತ್ರವಲ್ಲ ನ್ಯೂಝಿಲ್ಯಾಂಡ್‌ನ ವಿರುದ್ಧ ಆತಿಥೇಯ ಇಂಗ್ಲೆಂಡ್ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ಪಾಕ್‌ಗೆ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶಕ್ಕೆ ತಡೆ ಉಂಟಾಯಿತು.

  ಇದೀಗ ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಲು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾ ದೇಶ ವಿರುದ್ಧ 350 ರನ್ ದಾಖಲಿಸಿ 311ರನ್‌ಗಳ ಜಯ ಅಥವಾ 400 ರನ್ ಸೇರಿಸಿ 316 ರನ್‌ಗಳ ಅಂತರದಲ್ಲಿ ಜಯ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.¹¨ÜªÃÜá.

 ಸರ್ಫರಾಝ್ ಅಹ್ಮದ್ ನಾಯಕತ್ವದ ಪಾಕ್‌ತಂಡ ಕಠಿಣ ಸವಾಲನ್ನು ಎದುರಿಸುವಂತಾಗಿದೆ. ಒಂದು ವೇಳೆ ಪಾಕಿಸ್ತಾನ ಟಾಸ್ ಸೋತು ಫೀಲ್ಡಿಂಗ್ ಅವಕಾಶ ಪಡೆದರೆ ಪಾಕ್‌ಗೆ ಸೆಮಿಫೈನಲ್ ಅವಕಾಶ ಕೈತಪ್ಪುತ್ತದೆ. ಈ ಪಂದ್ಯದಲ್ಲಿ ಜಯ ಗಳಿಸಿದರೂ ಪಾಕ್‌ಗೆ ನಾಕೌಟ್‌ನಲ್ಲಿ ಅವಕಾಶ ದೊರೆಯಲಾರದು. ನ್ಯೂಝಿಲೆಂಡ್ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 119 ರನ್‌ಗಳ ಸೋಲು ಅನುಭವಿಸಿದೆ. 9 ಪಂದ್ಯಗಳಲ್ಲಿ 11 ಅಂಕಗಳನ್ನು ಗಳಿಸಿರುವ ನ್ಯೂಝಿಲ್ಯಾಂಡ್ +0.175 ರನ್ ಧಾರಣೆಯೊಂದಿಗೆ ಅಗ್ರ 4ರಲ್ಲಿ ಸ್ಥಾನ ಪಡೆದಿದೆ. ಪಾಕಿಸ್ತಾನ 8 ಪಂದ್ಯಗಳಲ್ಲಿ 8 ಅಂಕ ಮತ್ತು -0.792 ರನ್ ಧಾರಣೆಯನ್ನು ಹೊಂದಿದೆ. ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲು ಅನುಭವಿಸಿದ ಬಳಿಕ ದಕ್ಷಿಣ ಆಫ್ರಿಕ, ನ್ಯೂಝಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಜಯ ಗಳಿಸಿ 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಬಾಬರ್ ಆಝಮ್ ಮತ್ತು ಹಾರಿಸ್ ಸೊಹೈಲ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಪಾಕ್‌ನ ಗೆಲುವಿಗೆ ಕೊಡುಗೆ ನೀಡಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧ ಎಡಗೈ ವೇಗಿ ಶಾಹೀನ್ ಅಫ್ರಿದಿ 5 ವಿಕೆಟ್ ಉಡಾಯಿಸಿ ಮುಹಮ್ಮದ್ ಆಮಿರ್ ನೇತೃತ್ವದ ವೇಗದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಿದ್ದರು. ಬಾಂಗ್ಲ್ಲಾದೇಶ ತಂಡ ಈಗಾಗಲೇ 8 ಪಂದ್ಯಗಳಲ್ಲಿ 7 ಅಂಕಗಳನ್ನು ಪಡೆದಿದೆ. ದಕ್ಷಿಣ ಆಫ್ರಿಕ, ಅಫ್ಘಾನಿಸ್ತಾನ ಮತ್ತು ವೆಸ್ಟ್‌ಇಂಡೀಸ್ ವಿರುದ್ಧ ಜಯ ಗಳಿಸಿದ್ದರೂ, ನಾಕೌಟ್ ಹಾದಿ ಸುಗಮವಾಗಲಿಲ್ಲ. ಕೊನೆಯ ಪಂದ್ಯದಲ್ಲಿ ಪಾಕ್‌ಗೆ ಆಘಾತ ನೀಡಲು ಎದುರು ನೋಡುತ್ತಿದೆ. ಬಾಂಗ್ಲಾದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ವಿಶ್ವಕಪ್ ಇತಿಹಾಸದಲ್ಲಿ 500 ರನ್ ಮತ್ತು 10 ವಿಕೆಟ್ ಪಡೆದ ಏಕೈಕ ಆಟಗಾರ. ಅವರ ನೆರವಿನಲ್ಲಿ ಬಾಂಗ್ಲಾದ ಸ್ಕೋರ್ ಈ ವಿಶ್ವಕಪ್‌ನಲ್ಲಿ 300ರ ಗಡಿ ದಾಟಿದೆ. ಭಾರತದ ವಿರುದ್ಧ ಕೊನೆಯ ಪಂದ್ಯದಲ್ಲಿ ಬಾಂಗ್ಲಾ ಕಳಪೆ ಪ್ರದರ್ಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News