ಸಿಬಿಐಗೆ ಬಜೆಟ್ ಹಂಚಿಕೆಯಲ್ಲಿ ಅಲ್ಪ ಏರಿಕೆ

Update: 2019-07-05 14:28 GMT

 ಹೊಸದಿಲ್ಲಿ,ಜು.5: 2019-20ನೇ ಸಾಲಿನ ಬಜೆಟ್‌ನಲ್ಲಿ ದೇಶದ ಪ್ರಮುಖ ತನಿಖಾ ಸಂಸ್ಥೆ ಸಿಬಿಐಗೆ 781.01 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಕಳೆದ ವರ್ಷ ನೀಡಲಾಗಿದ್ದ 778.93 ಕೋ.ರೂ.ಗೆ ಹೋಲಿಸಿದರೆ 2.08 ಕೋ.ರೂ.ಗಳ ಅಲ್ಪ ಏರಿಕೆಗೆ ಅದು ತೃಪ್ತಿ ಪಟ್ಟುಕೊಳ್ಳಬೇಕಿದೆ.

2018-19ರ ಬಜೆಟ್‌ನಲ್ಲಿ ಆರಂಭದಲ್ಲಿ ಸಿಬಿಐಗೆ 698.38 ಕೋ.ರೂ.ಗಳನ್ನು ನಿಗದಿ ಮಾಡಲಾಗಿತ್ತಾದರೂ ಬಳಿಕ ಅದನ್ನು 778.93 ಕೋ.ರೂ.ಗೆ ಪರಿಷ್ಕರಿಸಲಾಗಿತ್ತು.

ಪ್ರಸಕ್ತ ವರ್ಷದ ಮುಂಗಡ ಪತ್ರ ಹಂಚಿಕೆಯಲ್ಲಿ ಸಿಬಿಐ ಇ-ಆಡಳಿತ,ತರಬೇತಿ ಕೇಂದ್ರಗಳ ಆಧುನೀಕರಣ,ತಾಂತ್ರಿಕ ಮತ್ತು ವಿಧಿವಿಜ್ಞಾನ ಬೆಂಬಲ ಘಟಕಗಳ ಸ್ಥಾಪನೆ,ಸಮಗ್ರ ಆಧುನೀಕರಣ ಮತ್ತು ನಿವೇಶನ ಖರೀದಿ,ಕಚೇರಿ ಮತ್ತು ವಸತಿ ಕಟ್ಟಡಗಳ ನಿರ್ಮಾಣಗಳಂತಹ ವಿವಿಧ ಯೋಜನೆಗಳಿಗೂ ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News