ಜನರಿಗೆ ಥಳಿಸಲು ಈಗ ‘ಜೈ ಶ್ರೀ ರಾಮ್’ ಘೋಷಣೆ ಬಳಸಲಾಗುತ್ತಿದೆ: ಅಮರ್ತ್ಯ ಸೇನ್

Update: 2019-07-06 09:43 GMT

ಕೊಲ್ಕತ್ತಾ, ಜು.6: ‘ಜೈ ಶ್ರೀ ರಾಮ್’ ಘೋಷಣೆಯನ್ನು ದೇಶಾದ್ಯಂತ ಜನರಿಗೆ ಥಳಿಸಲು ಬಳಸಲಾಗುತ್ತಿದೆ ಎಂದು ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ.

“ಈ ರೀತಿಯಾಗಿ ಈ ಹಿಂದೆ ಜೈ ಶ್ರೀ ರಾಮ್ ಘೋಷಣೆಯನ್ನು ನಾನು ಕೇಳಿಲ್ಲ. ಈಗ ಜನರನ್ನು ಥಳಿಸಲು ಅದನ್ನು ಬಳಸಲಾಗುತ್ತಿದೆ.  ಬಂಗಾಳಿ ಸಂಸ್ಕೃತಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲವೆಂದು ನನಗನಿಸುತ್ತದೆ'' ಎಂದು ಕೊಲ್ಕತ್ತಾದ ಜಾಧವಪುರ್ ವಿವಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಾ ಅವರು ಹೇಳಿದ್ದಾರೆ.

“ರಾಜ್ಯದಲ್ಲಿ ಈ ಹಿಂದೆ ರಾಮ ನವಮಿ ಆಚರಿಸಿದ ಬಗ್ಗೆ ನಾನು ಕೇಳಿರಲಿಲ್ಲ,  ನನ್ನ ನಾಲ್ಕು ವರ್ಷದ ಮೊಮ್ಮಗಳ ಬಳಿ ನಿನ್ನ ಪ್ರೀತಿಯ ದೇವರು ಯಾರೆಂದು ಕೇಳಿದಾಗ ಆಕೆ ಮಾ ದುರ್ಗಾ ಎಂದು ಹೇಳಿದಳು, ಮಾ ದುರ್ಗಾಳ ಮಹತ್ವವನ್ನು ರಾಮ್ ನವಮಿ ಜತೆ ಹೋಲಿಸಲು ಸಾಧ್ಯವಿಲ್ಲ''ಎಂದು ಸೇನ್ ಹೇಳಿದರು.

“ಒಂದು ನಿರ್ದಿಷ್ಟ ಧರ್ಮದ ಜನರಿಗೆ ಸ್ವತಂತ್ರವಾಗಿ ತಿರುಗಾಡಲು ಭಯವಿದೆಯೆಂದಾದರೆ ಇದು ಗಂಭೀರ ವಿಚಾರ'' ಎಂದು  ಅವರು ಹೇಳಿದರು.

ಸೇನ್ ಹೇಳಿಕೆಯನ್ನು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಟೀಕಿಸಿದ್ದಾರೆ. “ಅಮರ್ತ್ಯ ಸೇನ್ ಅವರಿಗೆ ಪ್ರಾಯಶಃ ಬಂಗಾಳದ ಬಗ್ಗೆ ತಿಳಿದಿಲ್ಲ. ಅವರಿಗೆ ಬಂಗಾಳಿ ಅಥವಾ ಭಾರತೀಯ ಸಂಸ್ಕೃತಿ ಗೊತ್ತೇನು ?, ಜೈ ಶ್ರೀ ರಾಮ್ ಪ್ರತಿ ಗ್ರಾಮದಲ್ಲಿ ಹೇಳಲಾಗುತ್ತದೆ. ಈಗ ಇಡೀ ಬಂಗಾಳ ಕೂಡ ಅದನ್ನು ಹೇಳುತ್ತಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News