ಪೋಲ್ಯಾಂಡ್ ಕುಟ್ನೊ ಅಥ್ಲೆಟಿಕ್ಸ್: 200 ಮೀ. ಓಟದಲ್ಲಿ ಭಾರತದ ಮುಹಮ್ಮದ್ ಅನಸ್ ಗೆ ಚಿನ್ನ

Update: 2019-07-08 07:11 GMT

ಹೊಸದಿಲ್ಲಿ, ಜು.8: ಪೋಲ್ಯಾಂಡ್ ನಲ್ಲಿ ನಡೆಯುತ್ತಿರುವ ಕುಟ್ನೊ ಅಥ್ಲೆಟಿಕ್ಸ್ ಮೀಟ್ ನಲ್ಲಿ ಭಾರತದ ಮುಹಮ್ಮದ್ ಅನಸ್ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

21.18 ಸೆಕೆಂಡ್ ಗಳಲ್ಲಿ ಅನಸ್ ಗುರಿಯನ್ನು ತಲುಪಿದರೆ ದ್ವಿತೀಯ ಸ್ಥಾನಿ ನೋಹ್ ನಿರ್ಮಲ್ ಟೋಮ್ 21.66 ಸೆಕೆಂಡುಗಳಲ್ಲಿ ಗುರಿ ತಲುಪಿದರು. 400 ಮೀ. ಹರ್ಡಲ್ಸ್ ನಲ್ಲಿ ಎಂ.ಪಿ. ಜಾಬಿರ್ ಚಿನ್ನ ಗಳಿಸಿದರೆ, ಜಿತಿನ್ ಪೌಲ್ ತೃತೀಯ ಸ್ಥಾನ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News