ಫೇಸ್‌ಬುಕ್ ವಯಸ್ಕರ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು: ಅಧ್ಯಯನ ವರದಿ

Update: 2019-07-08 15:26 GMT

 ಹದಿಹರೆಯದವರು ಸಾಮಾಜಿಕ ಮಾಧ್ಯಮ ಜಾಲತಾಣಗಳ ಬಳಕೆಯ ಅಡ್ಡ ಪರಿಣಾಮಗಳ ಕುರಿತು ತಮ್ಮ ಹಿರಿಯರಿಂದ ಸಾಕಷ್ಟು ಉಪದೇಶಗಳನ್ನು ಕೇಳುತ್ತಲೇ ಇರುತ್ತಾರೆ. ‘ಫೇಸ್‌ಬುಕ್‌ನಲ್ಲಿ ನಿನ್ನ ಸಮಯ ಹಾಳು ಮಾಡಬೇಡ/ಕೆಲವು ಪುಸ್ತಕಗಳನ್ನು ಓದಲು ಪ್ರಯತ್ನಿಸು/ನಿನ್ನ ಸ್ಕ್ರೀನ್ ವೀಕ್ಷಣೆ ಸಮಯಕ್ಕೊಂದು ಮಿತಿಯಿರಲಿ/ಫೇಸಬುಕ್‌ನಿಂದೇನೂ ಉಪಯೋಗವಿಲ್ಲ ’ ಎಂಬ ಕೆಲವು ಬುದ್ಧಿವಾದಗಳು ಮಕ್ಕಳಿರುವ ಕುಟುಂಬಗಳಲ್ಲಿ ‘ವರ್ಲ್ಡ್ ಫೇಮಸ್ ’ ಆಗಿಬಿಟ್ಟಿವೆ.

ಆದರೆ ವಯಸ್ಕರ ವಿಷಯದಲ್ಲಿ ಹೀಗಲ್ಲ. ಅವರಲ್ಲಿ ಗರಿಷ್ಠ ಜನರು ಫೇಸ್‌ಬುಕ್,ಇನ್‌ಸ್ಟಾಗ್ರಾಂ ಮತ್ತು ಸ್ನಾಪ್ ಚಾಟ್‌ಗಳಂತಹ ಆ್ಯಪ್‌ಗಳನ್ನು ತಮ್ಮ ಮೊಬೈಲ್‌ಗಳಲಿ ಹೊಂದಿರುತ್ತಾರೆ. ಈ ಆ್ಯಪ್‌ಗಳು/ವೆಬ್‌ಸೈಟ್‌ಗಳು ಅವರು ತಮ್ಮ ಹಳೆಯ ಸ್ನೇಹಿತರೊಂದಿಗೆ ಮರುಸಂಪರ್ಕ ಸಾಧಿಸಲು ನೆರವಾಗುತ್ತವೆ,ಕುಟುಂಬ ಸದಸ್ಯರು ಮತ್ತು ಬಂಧುಗಳೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಮಾಡುತ್ತವೆ. ನಿಮ್ಮ ವಿರಾಮದ ಸಮಯವನ್ನು ಕಳೆಯಲು ಮತ್ತು ನಿಮ್ಮನ್ನು ವ್ಯಸ್ತರನ್ನಾಗಿಸಲು ಈ ಆ್ಯಪಗಳು ಉತ್ತಮ ಮಾರ್ಗಗಳಾಗಿವೆ.

ವಯಸ್ಕರು ನಿಯಮಿತವಾಗಿ ಅಂತರ್ಜಾಲ ಮತು ಸಾಮಾಜಕ ಮಾಧ್ಯಮಗಳನ್ನು ಬಳಸುವುದು ಅವರ ಮಾನಸಿಕ ಆರೋಗ್ಯವನ್ನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಅಮೆರಿಕದ ಮಿಚಿಗನ್ ವಿವಿಯ ವಿಜ್ಞಾನಿಗಳ ತಂಡವು ನಡೆಸಿದ ಹೊಸ ಅಧ್ಯಯನವು ಹೇಳಿದೆ. ಇವುಗಳ ಬಳಕೆಯಿಂದ ವಯಸ್ಕರು ಖುಷಿಯಿಂದಿರುವ ಹೆಚ್ಚಿನ ಸಾಧ್ಯತೆಯಿದೆ ಮತ್ತು ಮಾನಸಿಕ ತೊಂದರೆ,ಕುಂದಿದ ಉತ್ಸಾಹ ಮತ್ತು ಉದ್ವೇಗಗಳಂತಹ ಗಂಭೀರ ಸಮಸ್ಯೆಗಳಿಗೆ ತುತ್ತಾಗುವ ಅಪಾಯ ದೂರವಾಗುತ್ತದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳು ಬದುಕನ್ನು ಸುಲಭಗೊಳಿಸಿವೆ. ಜನರು ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಪಡೆಯಲು,ಗೆಳೆತನಗಳನ್ನು ಹಾಗೂ ಬಂಧುಗಳು ಮತ್ತು ಕುಟುಂಬದೊಂದಿಗೆ ಸಂಪರ್ಕವನ್ನು ಕಾಯ್ದುಕೊಳ್ಳಲು ಈ ಸಂವಹನ ತಂತ್ರಜ್ಞಾನಗಳು ನೆರವಾಗಿವೆ ಎನ್ನುವುದು ಅಧ್ಯಯನ ತಂಡದ ಅಭಿಪ್ರಾಯ.

ಈವರೆಗೆ ಯುವಜನರು ಸಾಮಾಜಿಕ ಮಾಧ್ಯಮ ಅಧ್ಯಯನದ ಗುರಿಯಾಗಿರಲಿಲ್ಲ,ಆದರೆ ಇನ್ನು ಮುಂದೆ ಅವರೂ ಅಧ್ಯಯನದ ಭಾಗವಾಗಿರುತ್ತಾರೆ ಎಂದಿದ್ದಾರೆ ಮಿಚಿಗನ್ ವಿವಿಯ ಪ್ರೊ.ಕೀಥ್ ಹ್ಯಾಂಪ್ಟನ್.

ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಹೊಂದಿರುವುದು ಬಹಳಷ್ಟು ಮಾನಸಿಕ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ ಎಂದು ಅಧ್ಯಯನವು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News