×
Ad

ಆಪರೇಷನ್ ಕಮಲ ಖಂಡಿಸಿ ಬೀದಿಗಿಳಿದ ಕಾಂಗ್ರೆಸ್ –ಜೆಡಿಎಸ್ ನಾಯಕರು

Update: 2019-07-10 15:16 IST

ಬೆಂಗಳೂರು , ಜು. 10: ಬಿಜೆಪಿ ಆಪರೇಷನ್ ಕಮಲ ಖಂಡಿಸಿ ಕಾಂಗ್ರೆಸ್  -ಜೆಡಿಎಸ್  ನ ಹಿರಿಯ ನಾಯಕರು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ. ಜೆಡಿಎಸ್​ ವರಿಷ್ಠಎಚ್.ಡಿ.ದೇವೇಗೌಡ, ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಕೆ.ಸಿ.ವೇಣುಗೋಪಾಲ್ ,  ಸಿದ್ದರಾಮಯ್ಯ ,ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್ ಸೇರಿದಂತೆ  ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ರಾಜಭವನದ ಮುಂದೆ ರಸ್ತೆಯಲ್ಲಿ ಕುಳಿತು ಉಭಯ ಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠರಾದ ಎಚ್ .ಡಿ.ದೇವೇಗೌಡ ಅವರು ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿದೆ.  ಸರಕಾರವನ್ನು ಉರುಳಿಸಲು ಯತ್ನ ನಡೆಸಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News