4,800 ಎಂಬಿಬಿಎಸ್ ಸೀಟು ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ಮೀಸಲು: ಸಚಿವರು

Update: 2019-07-12 16:59 GMT

ಹೊಸದಿಲ್ಲಿ, ಜೂ. 12: ಪ್ರಸಕ್ತ ವರ್ಷದಲ್ಲಿ ಆರ್ಥಿಕ ದುರ್ಬಲವರ್ಗದ ವಿದ್ಯಾರ್ಥಿಗಳಿಗೆ 4,800 ಎಂಬಿಬಿಎಸ್ ಸೀಟುಗಳನ್ನು ಮೀಸಲಿರಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಶುಕ್ರವಾರ ತಿಳಿಸಿದ್ದಾರೆ.

ಮುಂದಿನ ಎರಡು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರಗಳಲ್ಲಿ 24,698 ಸ್ಥಾನಗಳು ಏರಿಕೆಯಾಗಿದೆ ಎಂದು ಅವರು ಲೋಕಸಭೆಗೆ ತಿಳಿಸಿದರು. 2017-18 ಹಾಗೂ 2019-20ರ ಅವಧಿಯಲ್ಲಿ ಪದವಿಯಲ್ಲಿ 15,815 ಹಾಗೂ ಸ್ನಾತಕೋತ್ತರದಲ್ಲಿ 2,153 ಸೀಟುಗಳು ಹೆಚ್ಚಾಗಿವೆ.

2019-20ರಲ್ಲಿ ಪದವಿಯಲ್ಲಿ 10,565 ಹಾಗೂ ಸ್ನಾತಕೋತ್ತರದಲ್ಲಿ 2,153 ಸೀಟುಗಳು ಹೆಚ್ಚಾಗಿವೆ ಎಂದು ಅವರು ತಿಳಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಸುಮಾರು 75 ಸಾವಿರ ವಿದ್ಯಾರ್ಥಿಗಳು ಎಂಬಿಬಿಎಸ್‌ಗೆ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು. ದೇಶಾದ್ಯಂತ ಇರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳ ಸೀಟುಗಳ ಸಂಖ್ಯೆ ಹೆಚ್ಚಿಸಲು ಸರಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News