ಲಡಾಕ್‌ನಲ್ಲಿ ಚೀನಾದ ಸೈನಿಕರು ಒಳನುಗ್ಗಿಲ್ಲ: ಜ. ಬಿಪಿನ್ ರಾವತ್

Update: 2019-07-13 15:51 GMT

 ಹೊಸದಿಲ್ಲಿ, ಜು.13: ಲಡಾಕ್‌ನ ಡೆಮ್‌ಚೋಕ್ ವಿಭಾಗದಲ್ಲಿ ಚೀನಾದ ಸೈನಿಕರು ಗಡಿದಾಟಿ ಒಳನುಗ್ಗಿದ್ದಾರೆ ಎಂಬ ವರದಿಯನ್ನು ಸೇನಾಪಡೆಯ ಮುಖ್ಯಸ್ಥ ಜ. ಬಿಪಿನ್ ರಾವತ್ ನಿರಾಕರಿಸಿದ್ದಾರೆ.

 ಜುಲೈ 6ರಂದು ದಲಾಯಿ ಲಾಮಾರ ಜನ್ಮದಿನದ ಸಂಭ್ರಮ ಆಚರಿಸಿದ್ದ ಕೆಲವು ಟಿಬೆಟಿಯನ್ನರು ಟಿಬೆಟ್ ಧ್ವಜವನ್ನು ಹಾರಿಸಿದ್ದರು. ಇದನ್ನು ಆಕ್ಷೇಪಿಸಿದ ಚೀನಾದ ಸೈನಿಕರು ವಾಸ್ತವಿಕ ನಿಯಂತ್ರಣಾ ರೇಖೆಯನ್ನು ದಾಟಿ ಒಳಬಂದಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

    “ವಾಸ್ತವಿಕ ನಿಯಂತ್ರಣ ರೇಖೆಯೆಂದು ಚೀನಾದವರು ಗ್ರಹಿಸಿಕೊಂಡಿರುವ ಪ್ರದೇಶದಲ್ಲಿ ಅವರ ಕೆಲವು ಸೈನಿಕರು ಗಸ್ತು ತಿರುಗಿದರು. ನಾವು ಅವರನ್ನು ತಡೆದೆವು. ಆಗ ಭಾರತಕ್ಕೆ ಸೇರಿದ ಪ್ರದೇಶದಲ್ಲಿ ಸ್ಥಳೀಯರು ದಲಾಯಿ ಲಾಮಾರ ಜನ್ಮದಿನಾಚರಣೆಯ ಸಂಭ್ರಮಾಚರಣೆಯಲ್ಲಿದ್ದರು. ಅಲ್ಲಿ ಏನು ನಡೆಯುತ್ತಿದೆ ಎಂದು ವೀಕ್ಷಿಸಲು ಚೀನಾದ ಸೈನಿಕರು ಆಗಮಿಸಿದ್ದರು. ಆದರೆ ಒಳಗೆ ನುಗ್ಗಿಲ್ಲ. ಎಲ್ಲವೂ ಸಹಜ ಸ್ಥಿತಿಯಲ್ಲಿದೆ” ಎಂದು ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News