ಪೊಲೀಸ್ ಕಾನ್ ಸ್ಟೇಬಲನ್ನು ಥಳಿಸಿ ಹತ್ಯೆಗೈದ ಗುಂಪು
Update: 2019-07-13 21:54 IST
ಜೈಪುರ, ಜು.13: ಜಮೀನು ವಿವಾದವೊಂದನ್ನು ಬಗೆಹರಿಸಲು ಮುಂದಾದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರನ್ನು ಗುಂಪೊಂದು ಥಳಿಸಿ ಕೊಂದ ಘಟನೆ ರಾಜಸ್ಥಾನದ ರಾಜ್ ಸಮಂಡ್ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಕುನ್ವಾರಿಯಾ ನಿವಾಸಿ ಹೆಡ್ ಕಾನ್ ಸ್ಟೇಬಲ್ ಅಬ್ದುಲ್ ಗನಿ ಎಂದು ಗುರುತಿಸಲಾಗಿದೆ. ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿ ಸ್ಥಳ ಪರಿಶೀಲನೆಗಾಗಿ ಅವರು ತೆರಳಿದ್ದು, ಆ ಸಂದರ್ಭ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು ಎನ್ನಲಾಗಿದೆ.
ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು.