ತಮಿಳುನಾಡಿನಲ್ಲಿ ಬೀಫ್ ಸೂಪ್ ಸೇವಿಸಿದ ಯುವಕನಿಗೆ ಹಲ್ಲೆ: ಟ್ವಿಟರ್ ನಲ್ಲಿ ಟ್ರೆಂಡ್ ಆದ #Beef4life

Update: 2019-07-14 09:51 GMT

ಚೆನ್ನೈ, ಜು.14: ಬೀಫ್ ಸೂಪ್ ಸೇವಿಸುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಕ್ಕಾಗಿ ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ಥಳಿಸಿದ ಘಟನೆ ಇತ್ತೀಚೆಗೆ ತಮಿಳುನಾಡಿನ ನಾಗಪಟ್ಟಿಣಂನಲ್ಲಿ ನಡೆದಿತ್ತು.

ಈ ಘಟನೆಯ ನಂತರ ಇದೀಗ ಟ್ವಿಟರ್ ನಲ್ಲಿ #Beef4life, #WeLoveBeef and #BeefForLife  ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ಆಗುತ್ತಿವೆ. ಸಾವಿರಾರು ಜನರು, ಪ್ರಮುಖವಾಗಿ ತಮಿಳುನಾಡಿನ ಜನರು ಬೀಫ್ ಸೇವನೆಯ ತಮ್ಮ ಹಕ್ಕಿನ ಬಗ್ಗೆ ಈ ಹ್ಯಾಶ್ ಟ್ಯಾಗ್ ಗಳ ಮೂಲಕ ಧ್ವನಿಯೆತ್ತಿದ್ದಾರೆ.

“ಬೀಫ್ ತಿನ್ನಿ, ಹಿಂದುತ್ವ ಫ್ಯಾಶಿಸಂ ವಿರುದ್ಧ ಹೋರಾಡಿ, ನಮ್ಮ ಆಹಾರದ ವಿಚಾರದಲ್ಲಿ ಆದೇಶಿಸಲು ಅವರಿಗೆ ಅವಕಾಶ ನೀಡಬೇಡಿ, ಅದೂ ತಮಿಳುನಾಡಿನಲ್ಲಿ, “ನಾನು ಚಿಲ್ಲಿ ಚಿಕನ್ ಅಂದುಕೊಂಡು ಒಂದು ಬಾರಿ ಗೊತ್ತಿಲ್ಲದೆ ಬೀಫ್ ತಿಂದಿದ್ದೆ. ನನಗೆ ಅದರ ರುಚಿ ಹಿಡಿಸಲಿಲ್ಲ. ಆದರೆ ಬೀಫ್ ತಿನ್ನುವವರಿಗೆ ನನ್ನ ಬೆಂಬಲವಿದೆ”, “ನಾನು ತಮಿಳು ಬುಡಕಟ್ಟು ಸಮುದಾಯಕ್ಕೆ ಸೇರಿದವನು. ಬೀಫ್ ನಮ್ಮ ಸಂಸ್ಕೃತಿಯ ಭಾಗ” ಎಂದು ಟ್ವಿಟರಿಗರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News