ಕುರ್ ಆನ್ ವಿತರಿಸಿ: ಫೇಸ್ ಬುಕ್ ನಲ್ಲಿ ಧಾರ್ಮಿಕ ಅವಹೇಳನ ಮಾಡಿದ ಮಹಿಳೆಗೆ ರಾಂಚಿ ನ್ಯಾಯಾಲಯ ಆದೇಶ

Update: 2019-07-16 16:42 GMT

ರಾಂಚಿ, ಜು. 16: ಫೇಸ್‌ಬುಕ್ ಪೋಸ್ಟ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ರಾಂಚಿ ಮೂಲದ ಯುವತಿಗೆ ಜಾಮೀನು ಶರತ್ತಾಗಿ ಕುರ್‌ಆನ್‌ನ ಪ್ರತಿಗಳನ್ನು ಹಂಚುವಂತೆ ರಾಂಚಿ ನ್ಯಾಯಾಲಯ ನಿರ್ದೇಶಿಸಿದೆ.

ಕಳೆದ ತಿಂಗಳು ಜಾರ್ಖಂಡ್‌ನಲ್ಲಿ ಗುಂಪಿನಿಂದ ಹಲ್ಲೆಗೊಳಗಾದ ಬಳಿಕ ಮೃತಪಟ್ಟ ಮುಸ್ಲಿಂ ಯುವಕ ತಬ್ರೇಝ್ ಅನ್ಸಾರಿ ಕುರಿತ ಫೇಸ್‌ಬುಕ್ ಪೋಸ್ಟ್ ಅನ್ನು ಜುಲೈ 12ರಂದು ರಿಚಾ ಭಾರತಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಅನಂತರ ರಾಂಚಿ ಸಮೀಪದ ಪಿಥೌರಿಯಾದ ಸದಾರ್ ಅಂಜುಮನ್ ಸಮಿತಿ ಭಾರತಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ ಆರೋಪದಲ್ಲಿ ಪೊಲೀಸರು ಭಾರತಿಯನ್ನು ಬಂಧಿಸಿದ್ದರು.

ಅನಂತರ ರಾಂಚಿ ನ್ಯಾಯಾಲಯ ಭಾರತಿಗೆ ಜಾಮೀನು ನೀಡಿತು. ಆದರೆ, ವಿಚಾರಣೆ ನಡೆಸಿದ ನ್ಯಾಯಾಂಗ ದಂಡಾಧಿಕಾರಿ ಮನೀಶ್ ಸಿಂಗ್, ಸದಾರ್ ಅಂಜುಮಾನ ಸಮಿತಿಯ ಸದಸ್ಯ ಹಾಗೂ ದೂರುದಾರ ಮನ್ಸೂರ್ ಖಲೀಫಾ ಅವರಿಗೆ ಕುರ್‌ಆನ್ ಪ್ರತಿಯನ್ನು ನೀಡುವಂತೆ ಭಾರತಿಗೆ ಸೂಚಿಸಿದರು. ಅಲ್ಲದೆ ಕುರ್‌ಆನ್‌ನ 5 ಪ್ರತಿಗಳನ್ನು ಶಾಲೆ, ಕಾಲೇಜುಗಳಿಗೂ ವಿತರಣೆ ಮಾಡುವಂತೆ ನಿರ್ದೇಶಿಸಿದರು.

ಇದಲ್ಲದೆ ತಲಾ 7 ಸಾವಿರ ರೂಪಾಯಿಯ ಎರಡು ಶ್ಯೂರಿಟಿ ಠೇವಣಿ ಇರಿಸುವಂತೆ ಭಾರತಿಗೆ ನ್ಯಾಯಾಂಗ ದಂಡಾಧಿಕಾರಿ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News