ಸುರಕ್ಷತಾ ನಿಯಮಗಳ ಉಲ್ಲಂಘನೆ: ಮೂವರು ಪೈಲಟ್‌ಗಳ ಅಮಾನತು

Update: 2019-07-16 16:31 GMT

ಹೊಸದಿಲ್ಲಿ,ಜು.16: ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಜು.2ರಂದು ಪುಣೆಯಿಂದ ಆಗಮಿಸಿದ್ದ ಸ್ಪೈಸ್ ಜೆಟ್ ವಿಮಾನವು ಇಳಿಯುತ್ತಿರುವಾಗ ರನ್‌ವೇ ಅಂಚಿನ ದೀಪಗಳಿಗೆ ಹಾನಿಯನ್ನುಂಟು ಮಾಡಿದ್ದಕ್ಕಾಗಿ ಅದರ ಇಬ್ಬರು ಪೈಲಟ್‌ಗಳ ಹಾರಾಟ ಪರವಾನಿಗೆಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಿ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ಮಂಗಳವಾರ ಆದೇಶಿಸಿದೆ. ಏರ್ ಇಂಡಿಯಾದ ಓರ್ವ ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿಯನ್ನೂ ಕರ್ತವ್ಯಚ್ಯುತಿ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ.

ಇತ್ತೀಚಿನ ವಾರಗಳಲ್ಲಿ ಡಿಜಿಸಿಎ ವಿವಿಧ ಉಲ್ಲಂಘನೆಗಳಿಗಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News