ಅಯೋಧ್ಯೆ ಸಂಧಾನ ಪ್ರಕ್ರಿಯೆ ಜು.31ರ ತನಕ ಮುಂದುವರಿಯಲಿದೆ: ಸುಪ್ರೀಂಕೋರ್ಟ್

Update: 2019-07-18 05:59 GMT

 ಹೊಸದಿಲ್ಲಿ, ಜು.18: ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದ ಸಂಧಾನ ಪ್ರಕ್ರಿಯೆ ಜು.31ರ ತನಕ ಮುಂದುವರಿಯಲಿದೆ. ಸಂಧಾನ ಸಮಿತಿ ತನ್ನ ವರದಿಯನ್ನು ಆಗಸ್ಟ್ 1ರೊಳಗೆ ಸಲ್ಲಿಸಬೇಕು. ಆಗಸ್ಟ್ 2ರಿಂದ ಓಪನ್ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಲಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ.

 ಜು.11 ರಂದು ಸಂಧಾನದ ಪ್ರಗತಿಯ ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ತಿಳಿಸಿತ್ತು. ಸಂಧಾನ ಮುಂದುವರಿಕೆಯಿಂದ ಫಲ ಕಾಣದಿದ್ದರೆ ಜು.25 ರಿಂದ ದಿನದಿಂದ ದಿನಕ್ಕೆ ವಿಚಾರಣೆ ಆರಂಭವಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಸುಪ್ರೀಂಕೋರ್ಟ್ ಕಳೆದ ವರ್ಷ ದಶಕಗಳ ಹಳೆಯ ವಿವಾದಕ್ಕೆ ಸಂಧಾನ ನಡೆಸಲು ಸುಪ್ರೀಂಕೋರ್ಟ್ ನ್ಯಾಯಾಧೀಶ ಎಫ್‌ಎಂ ಖಲೀಫುಲ್ಲಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯಲ್ಲಿ ಆಧ್ಯಾತ್ಮಿಕ ಗುರು ಶ್ರೀಶ್ರೀ ರವಿ ಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಾಂಚು ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News