ಶೇ.43ರಷ್ಟು ದ್ವೇಷದ ಅಪರಾಧಗಳು: ದಲಿತರು, ಅಲ್ಪಸಂಖ್ಯಾತರಿಗೆ ಉತ್ತರ ಪ್ರದೇಶ ಮತ್ತಷ್ಟು ಅಸುರಕ್ಷಿತ

Update: 2019-07-19 12:12 GMT

ಲಕ್ನೋ, ಜು.19: ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ ದಾಖಲಾದ ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹಾಗೂ ಗುಂಪು ಥಳಿತ ಪ್ರಕರಣಗಳ ಪೈಕಿ ಶೇ.43ರಷ್ಟು ಪ್ರಕರಣಗಳು ಉತ್ತರ ಪ್ರದೇಶ ರಾಜ್ಯವೊಂದರಲ್ಲಿಯೇ ನಡೆದಿವೆ.

2016-2019 ಅವಧಿಯಲ್ಲಿ ಆಯೋಗ ದಾಖಲಿಸಿದ 2,008 ಪ್ರಕರಣಗಳ ಪೈಕಿ 869 ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿವೆ. ಆದರೂ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದ ಪ್ರಕರಣಗಳು ಇಳಿಕೆಯಾಗಿವೆ. 2016-17 ಹಾಗೂ 2018-19 ಅವಧಿಯಲ್ಲಿ ಇಂತಹ ಪ್ರಕರಣಗಳಲ್ಲಿ ಶೇ 54ರಷ್ಟು ಇಳಿಕೆಯಾಗಿದೆ (42ರಿಂದ 19).

ಆದರೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ 41ರಷ್ಟು ಹೆಚ್ಚಾಗಿವೆ. ಅಂದರೆ 2016-17ರಲ್ಲಿ 221 ಪ್ರಕರಣಗಳು ವರದಿಯಾಗಿದ್ದರೆ, 2018-19ರಲ್ಲಿ 311 ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನ ಮುಸ್ಲಿಂ ಲೀಗ್ ಸಂಸದ ಕೆ ನವಸ್ಕನಿ ಅವರ ಪ್ರಶ್ನೆಗೆ ಕೇಂದ್ರ ಗೃಹ ಸಚಿವಾಲಯ ನೀಡಿದ ಲಿಖಿತ ಉತ್ತರದಲ್ಲಿ ಮೇಲಿನ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News