ತೃತೀಯ ಲಿಂಗಿಗಳ ರಕ್ಷಣಾ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

Update: 2019-07-19 16:01 GMT

ಹೊಸದಿಲ್ಲಿ, ಜು. 19: ತೃತೀಯ ಲಿಂಗಿಗಳ ಗುರುತು ಹಾಗೂ ಅವರ ವಿರುದ್ಧದ ತಾರತಮ್ಯ ನಿಷೇಧಿಸುವ ಹಕ್ಕು ಪ್ರತಿಪಾದಿಸುವ ಮೂಲಕ ತೃತೀಯ ಲಿಂಗಿಗಳನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಬಲೀಕರಣಗೊಳಿಸುವ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.

ತೃತೀಯ ಲಿಂಗಿಗಳನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಬಲೀಕರಣಗೊಳಿಸುವ ತೃತೀಯಲಿಂಗಿ ವ್ಯಕ್ತಿಗಳ (ರಕ್ಷಣೆ ಹಕ್ಕು) ಕಾಯ್ದೆಯನ್ನು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೋಟ್ ಮಂಡಿಸಿದರು. ಕಾಂಗ್ರೆಸ್‌ನ ನಾಯಕ ಶಶಿ ತರೂರ್ ಈ ಮಸೂದೆಯನ್ನು ವಿರೋಧಿಸಲು ಬಯಸಿದ್ದರು. ಆದರೆ, ಅವರ ಪಕ್ಷದ ಸದಸ್ಯರು ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ಕುರಿತು ಪ್ರತಿಭಟನೆ ನಡೆಸುತ್ತಿದ್ದುದರಿಂದ ತರೂರ್ ಮಾತನಾಡಲಿಲ್ಲ. ಅನಂತರ ಕಾಂಗ್ರೆಸ್ ಸದಸ್ಯರು ಕಲಾಪದಿಂದ ಹೊರ ನಡೆದರು. ಯಾವುದೇ ಹೊಸ ತಿದ್ದುಪಡಿ ಇಲ್ಲದೆ ಮಸೂದೆಯನ್ನು ಸಂಪುಟ ಬುಧವಾರ ಅಂಗೀಕರಿಸಿತು ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News