ಸ್ವಾತಂತ್ರ್ಯೋತ್ಸವ ಭಾಷಣ: ಜನರಿಂದ ಸಲಹೆ ಕೇಳಿದ ಪ್ರಧಾನಿ ಮೋದಿ

Update: 2019-07-19 16:35 GMT

ಹೊಸದಿಲ್ಲಿ, ಜು.19: ತಾನು ಸ್ವಾತಂತ್ರ್ಯೋತ್ಸವ ದಿನದಂದು ಮಾಡುವ ಭಾಷಣಕ್ಕೆ ಜನರಿಂದ ಸಲಹೆ ಕೇಳಿರುವ ಪ್ರಧಾನಿ ನರೇಂದ್ರ ಮೋದಿ, ಇದರಿಂದ ಜನಸಾಮಾನ್ಯರ ವಿಚಾರಗಳನ್ನು ಇಡೀ ದೇಶಕ್ಕೆ ತಿಳಿಸಲು ಅವಕಾಶ ದೊರಕುತ್ತದೆ ಎಂದಿದ್ದಾರೆ.

ದಿಲ್ಲಿಯ ಕೆಂಪುಕೋಟೆಯ ಮೇಲಿಂದ ತಾನು ಮಾಡುವ ಭಾಷಣಕ್ಕೆ ಜನಸಾಮಾನ್ಯರಿಂದ ಸಲಹೆ ಕೇಳುವ ಪರಿಪಾಠವನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಆಗಸ್ಟ್ 15ರಂದು ಮಾಡುವ ಭಾಷಣಕ್ಕೆ ನಿಮ್ಮ ಅಮೂಲ್ಯ ಸಲಹೆಯನ್ನು ನೀಡಿ ಎಂದು ಆಹ್ವಾನಿಸಲು ಸಂತಸವಾಗುತ್ತಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಜನತೆ ತಮ್ಮ ಸಲಹೆಗಳನ್ನು ಸಲ್ಲಿಸಲು ನಮೋ ಆ್ಯಪ್‌ನಲ್ಲಿ ಮುಕ್ತ ವೇದಿಕೆಯೊಂದನ್ನು ರೂಪಿಸಲಾಗಿದೆ. ನಿಮ್ಮ ಚಿಂತನೆ, ವಿಚಾರಧಾರೆಗಳನ್ನು 130 ಕೋಟಿ ಭಾರತೀಯರು ಆಲಿಸಲಿ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News