ಓಟಗಾರ್ತಿ ಹಿಮಾ ದಾಸ್‌ಗೆ ಐದನೇ ಚಿನ್ನ

Update: 2019-07-20 18:11 GMT

ಹೊಸದಿಲ್ಲಿ, ಜು.20: ಭಾರತದ ಓಟಗಾರ್ತಿ ಹಿಮಾ ದಾಸ್ ತನ್ನ ಅಬ್ಬರದ ಪ್ರದರ್ಶನ ಮುಂದುವರಿಸಿದ್ದು, ಈ ತಿಂಗಳಲ್ಲಿ ಐದನೇ ಚಿನ್ನದ ಪದಕ ತನ್ನದಾಗಿಸಿಕೊಂಡರು.

ಶನಿವಾರ ಝೆಕ್ ಗಣರಾಜ್ಯದಲ್ಲಿ ನಡೆದ 400 ಮೀ. ಓಟದಲ್ಲಿ 52.09 ಸೆಕೆಂಡ್‌ನಲ್ಲಿ ಗುರಿ ತಲುಪಿದ ಹಿಮಾ ಚಿನ್ನದ ನಗೆ ಬೀರಿದರು. ಹಿಮಾ 400 ಮೀ.ಓಟದಲ್ಲಿ ಈ ಋತುವಿನಲ್ಲಿ ಶ್ರೇಷ್ಠ ಸಮಯದಲ್ಲಿ ಗುರಿ ತಲುಪಿದರು. 52.88 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದು ಅವರ ಈ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು.

ಕಳೆದ ವರ್ಷ ಏಶ್ಯನ್ ಗೇಮ್ಸ್‌ನಲ್ಲಿ ವೈಯಕ್ತಿಕ ಶ್ರೇಷ್ಠ(50.79 ಸೆ.)ಸಮಯದಲ್ಲಿ ಗುರಿ ತಲುಪಿದ್ದರು.

ಈ ವರ್ಷದ ಎಪ್ರಿಲ್‌ನಲ್ಲಿ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆನ್ನುನೋವಿನಿಂದಾಗಿ 400 ಮೀ. ರೇಸ್ ಪೂರ್ಣಗೊಳಿಸಲು ವಿಫಲರಾಗಿದ್ದ ‘ಧಿಂಗ್ ಎಕ್ಸ್‌ಪ್ರೆಸ್’ ಖ್ಯಾತಿಯ ಹಿಮಾ ತಿಂಗಳೊಂದರಲ್ಲಿ 5ನೇ ಚಿನ್ನದ ಪದಕ ಜಯಿಸಿ ಭರ್ಜರಿ ಪ್ರದರ್ಶನ ತೋರಿದ್ದಾರೆ.

200 ಮೀ. ರೇಸ್‌ನಲ್ಲಿ ಶನಿವಾರ ಮುಹಮ್ಮದ್ ಅನಸ್(20.95 ಸೆ.)ಮೂರನೇ ಸ್ಥಾನ ಪಡೆದರು. 400 ಮೀ.ಹರ್ಡಲ್ಸ್ ರೇಸ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ(49.66 ಸೆಕೆಂಡ್)ಗುರಿ ತಲುಪಿದ ಎಂ.ಪಿ. ಜಬೀರ್ ಚಿನ್ನ ಜಯಿಸಿದರು. ನಿರ್ಮಲಾ ಟೋಮ್ 200 ಮೀ. ರೇಸ್‌ನಲ್ಲಿ 46.05 ಸೆಕೆಂಡ್‌ನಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News