ಇಂಡೋನೇಶ್ಯ ಓಪನ್: ಸಿಂಧುಗೆ ರನ್ನರ್ ಅಪ್ ಸ್ಥಾನ

Update: 2019-07-21 12:34 GMT

ಜಕಾರ್ತಾ, ಜು.21: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ರವಿವಾರ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೋಲು ಅನುಭವಿಸಿದ್ದಾರೆ.

ಇಂಡೊನೇಶ್ಯ ಓಪನ್ ಬಿಡಬ್ಲುಎಫ್ ಟೂರ್ ಸೂಪರ್ 1000 ಟೂರ್ನಮೆಂಟ್‌ನ ಫೈನಲ್‌ನಲ್ಲಿ ಸಿಂಧು ಎದುರಾಳಿ ಅಕಾನೆ ವಿರುದ್ಧ 15-21, 16-21 ಅಂತರದಲ್ಲಿ ಸೋಲು ಅನುಭವಿಸಿ ಪ್ರಶಸ್ತಿ ಎತ್ತುವ ಅವಕಾಶ ಕೈ ಚೆಲ್ಲಿದರು.

ಒಲಿಂಪಿಕ್‌ನಲ್ಲಿ ಬೆಳ್ಳಿ ಜಯಿಸಿದ್ದ ಸಿಂಧು ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದರೂ ಅವರಿಗೆ ಅಕಾನೆ ಯಮಗುಚಿ ಸವಾಲನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಈ ಹಿಂದೆ 14 ಪಂದ್ಯಗಳ ಪೈಕಿ 10ರಲ್ಲಿ ಯಮಗುಚಿ ವಿರುದ್ಧ ಜಯ ದಾಖಲಿಸಿದ್ದರು. ಇದೀಗ ಸಿಂಧು ಐದನೇ ಬಾರಿ ಸೋಲು ಅನುಭವಿಸಿದ್ದಾರೆ.

ಈ ಸಾಲಿನಲ್ಲಿ ನಂ.5 ಸಿಂಧು ಇಂಡೋನೇಶ್ಯ ಓಪನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಹಿಂದೆ ಸಿಂಗಾಪುರ ಓಪನ್ ಮತ್ತು ಇಂಡಿಯಾ ಓಪನ್‌ನಲ್ಲಿ ಸಿಂಧು ಸೆಮಿಫೈನಲ್ ಹಂತದಲ್ಲೇ ಅಭಿಯಾನ ಮುಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News