ಗೋಶಾಲೆಯಲ್ಲಿ ಮೂಲಸೌಕರ್ಯ, ಮೇವಿನ ಕೊರತೆ: 2 ತಿಂಗಳಲ್ಲಿ 159 ಗೋವುಗಳ ಸಾವು

Update: 2019-07-22 15:57 GMT

ಅಗರ್ತಲಾ,ಜು.22: ಕಳ್ಳ ಸಾಗಾಣಿಕೆದಾರರಿಂದ ರಕ್ಷಿಸಲ್ಪಟ್ಟು ಸಿಪಾಹಿಜಲಾ ಜಿಲ್ಲೆಯ ದೇವಿಪುರ ಗ್ರಾಮದಲ್ಲಿ ದಿಲ್ಲಿಯ ಎನ್‌ಜಿಒ ನಿರ್ವಹಿಸುತ್ತಿರುವ ಗೋಶಾಲೆಯಲ್ಲಿದ್ದ ಕನಿಷ್ಠ 159 ಗೋವುಗಳು ಸೂಕ್ತ ಮೂಲಸೌಕರ್ಯ ಮತ್ತು ಮೇವಿನ ಕೊರತೆಯಿಂದಾಗಿ ಕಳೆದ ಎರಡು ತಿಂಗಳುಗಳಲ್ಲಿ ಸಾವನ್ನಪ್ಪಿವೆ.

 ವರ್ಷದ ಹಿಂದೆ ಬಾಂಗ್ಲಾದೇಶಕ್ಕೆ ಕಳ್ಳಸಾಗಣೆಯಾಗುತ್ತಿದ್ದ ಸುಮಾರು 850 ಗೋವುಗಳನ್ನು ಬಿಎಸ್‌ಎಫ್ ರಕ್ಷಿಸಿತ್ತು. ಈ ಗೋವುಗಳನ್ನು ನೋಡಿಕೊಳ್ಳಲು ತನ್ನ ಬಳಿ ಅಗತ್ಯ ಮೂಲಸೌಕರ್ಯಗಳಿಲ್ಲದ್ದರಿಂದ ಬಿಎಸ್‌ಎಫ್ ರಾಜ್ಯ ಪೊಲೀಸರ ಮೊರೆ ಹೋಗಿತ್ತು,ಆದರೆ ಪೊಲೀಸರೂ ಕೈಚೆಲ್ಲಿದ್ದರು.

ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶವೊಂದರಂತೆ ಈ ಗೋವುಗಳನ್ನು ರಾಜ್ಯ ಸರಕಾರವು ತನ್ನ ವಶಕ್ಕೆ ತೆಗೆದುಕೊಂಡು,ಅವುಗಳನ್ನು ನೋಡಿಕೊಳ್ಳಬೇಕಿತ್ತು. ಆದರೆ ತ್ರಿಪುರಾ ಸರಕಾರದ ಅಧಿಕಾರಿಗಳು ಗೋವುಗಳನ್ನು ವಶಕ್ಕೆ ಪಡೆದುಕೊಳ್ಳಲು ವಿಫಲರಾದಾಗ ನಿರ್ವಹಣೆಯ ಹೊಣೆಯನ್ನು ವಹಿಸಿಕೊಳ್ಳುವಂತೆ ದಿಲ್ಲಿಯ ಧ್ಯಾನ್ ಪ್ರತಿಷ್ಠ್ಠಾನವನ್ನು ಒಪ್ಪಿಸಲಾಗಿತ್ತು. ಸರಕಾರವು ಅದಕ್ಕೆ ದೇವಿಪುರ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿ ಮಂಜೂರು ಮಾಡಿದ್ದು,ಇಲ್ಲಿ ಗೋಶಾಲೆಯನ್ನು ನಿರ್ಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News