ಜೆಇವಿ ಸೋಂಕು ಜ್ವರ: ಮೃತರ ಸಂಖ್ಯೆ 110ಕ್ಕೆ ಏರಿಕೆ

Update: 2019-07-23 17:56 GMT

ಗುವಾಹಟಿ, ಜು.23: ಅಸ್ಸಾಂನಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ ಜ್ವರ(ಸೊಳ್ಳೆಗಳಿಂದ ಹರಡುವ ಡೆಂಗೆ, ಕಾಮಾಲೆ ಜ್ವರದ ಲಕ್ಷಣಗಳಿರುವ ಕಾಯಿಲೆ)ದಿಂದ ಕಳೆದ 3 ದಿನದಲ್ಲಿ ಮತ್ತೆ 9 ಮಂದಿ ಸಾವನ್ನಪ್ಪಿದ್ದು ಇದುವರೆಗೆ ಒಟ್ಟು 110 ಜನ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಪ್ರಕಟಣೆ ತಿಳಿಸಿದೆ.

 ಗೋಲ್‌ಪಾರ, ಸೋನಿತ್‌ಪುರ, ಬಾರಪೇಟ, ಧುಬ್ರಿ, ಬೊಂಗಾಯ್‌ಗಾಂವ್ ಮತ್ತು ಕೊಕ್ರಝಾರ್ ಜಿಲ್ಲೆಯಲ್ಲಿ ಕಳೆದ 3 ದಿನದಲ್ಲಿ 9 ಸಾವಿನ ಪ್ರಕರಣ ಸಂಭವಿಸಿದೆ.

 ಅಲ್ಲದೆ 3 ದಿನದಲ್ಲಿ ಜೆಇವಿ ಸೋಂಕಿನ ಲಕ್ಷಣದ 38 ಹೊಸ ಪ್ರಕರಣ ದಾಖಲಾಗಿದ್ದು ಈ ತಿಂಗಳ ಆರಂಭದಿಂದ ಇದುವರೆಗೆ ರಾಜ್ಯದಲ್ಲಿ ಜೆಇವಿ ಸೋಂಕು ತಗುಲಿದವರ ಸಂಖ್ಯೆ 477ಕ್ಕೇರಿದೆ ಎಂದು ಆರೋಗ್ಯ ಅಭಿಯಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಸ್ಸಾಂನಲ್ಲಿ ಜೆಇವಿ ಸೋಂಕಿನ ಸಮಸ್ಯೆ ಗಂಭೀರ ಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಜೆಇವಿ ಪ್ರಕರಣದ ಪರಿಶೀಲನೆ ನಡೆಸಲು ತಂಡವೊಂದನ್ನು ಕೇಂದ್ರ ಸರಕಾರ ಜೂನ್ 30ರಂದು ರಾಜ್ಯಕ್ಕೆ ರವಾನಿಸಿತ್ತು. ಅಲ್ಲದೆ ಅಸ್ಸಾಂನ 28 ಜಿಲ್ಲೆಗಳಲ್ಲೂ 1ರಿಂದ 15 ವರ್ಷದೊಳಗಿನ ಮಕ್ಕಳಿಗೆ ರೋಗ ನಿರೋಧಕ ಚುಚ್ಚುಮದ್ದು ಹಾಕಿಸುವ ವ್ಯವಸ್ಥೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News