ಉದ್ಯೋಗ ನಷ್ಟದ ಬಗ್ಗೆ ಬಿಜೆಪಿ ಸರಕಾರದ ಮೌನ ಅಪಾಯಕಾರಿ: ಪ್ರಿಯಾಂಕಾ ಗಾಂಧಿ

Update: 2019-07-26 16:31 GMT

ಹೊಸದಿಲ್ಲಿ, ಜು. 27: ಅಟೋಮೊಬೈಲ್ ವಲಯದ 10 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದು ಮಾದ್ಯಮ ವರದಿಯೊಂದನ್ನು ಉಲ್ಲೇಖಿಸಿ ಶುಕ್ರವಾರ ಹೇಳಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಉದ್ಯೋಗ ಸಂಖ್ಯೆ ಇಳಿಕೆಯಾಗುತ್ತಿರುವ ಬಗ್ಗೆ ಬಿಜೆಪಿ ಸರಕಾರ ಮೌನ ವಹಿಸಿರುವುದು ‘ತೀವ್ರ ಅಪಾಯಕಾರಿ’ ಎಂದಿದ್ದಾರೆ.

ಆಟೊಮೊಬೈಲ್ ಉದ್ಯಮದ ನಿರಂತರ ಮಂದಗತಿಯಿಂದ ಸುಮಾರು 10 ಲಕ್ಷ ಉದ್ಯೋಗಗಳು ನಾಶವಾಗುವ ಸಾಧ್ಯತೆ ಇದೆ ಎಂದು ಅವರು ಟ್ಟೀಟ್ ಮಾಡಿದ್ದಾರೆ. ಆಟೊಮೊಬೈಲ್ ಉದ್ಯಮದ ಮಂದಗತಿಯಿಂದ 10 ಲಕ್ಷ ಉದ್ಯೋಗ ನಷ್ಟವಾಗುವ ಭೀತಿ ಇದೆ ಎಂಬ ಮಾಧ್ಯಮ ವರದಿಯನ್ನು ಅವರು ಟ್ವೀಟ್‌ನೊಂದಿಗೆ ಟ್ಯಾಗ್ ಮಾಡಿದ್ದಾರೆ. ಆಟೋಮೊಬೈಲ್ ವಲಯದಲ್ಲಿ ಕೆಲಸ ಮಾಡುತ್ತಿರುವ 10 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಈ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರು ಬೇರೆ ಉದ್ಯೋಗ ಹುಡುಕುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಬಿಜೆಪಿ ಸರಕಾರ ಮೌನವಹಿಸಿರುವುದು, ವ್ಯಾಪಾರ ಹಾಗೂ ನೀತಿಗಳು ದುರ್ಬಲವಾಗಿರುವುದು ಆರ್ಥಿಕತೆಗೆ ಅತಿ ದೊಡ್ಡ ಹೊಡೆತ ನೀಡಲಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News