ಸಿರಿಯ: 3 ತಿಂಗಳಲ್ಲಿ 4 ಲಕ್ಷ ಮಂದಿ ನಿರ್ವಸಿತ; ವಿಶ್ವಸಂಸ್ಥೆ

Update: 2019-07-26 17:33 GMT

ಬೈರೂತ್, ಜು. 26: ಕಳೆದ ಮೂರು ತಿಂಗಳ ಅವಧಿಯಲ್ಲಿ ವಾಯುವ್ಯ ಸಿರಿಯದಲ್ಲಿ 4 ಲಕ್ಷಕ್ಕೂ ಅಧಿಕ ಜನರು ನಿರ್ವಸಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.

 ‘‘ಎಪ್ರಿಲ್ ಕೊನೆಯಿಂದ 4 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ’’ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಂಸ್ಥೆ ಒಸಿಎಚ್‌ಎಯ ಡೇವಿಡ್ ಸ್ವಾನ್ಸನ್ ತಿಳಿಸಿದರು.

ಈ ವಲಯದಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ ಹಾಗೂ ಈ ಪೈಕಿ ಸುಮಾರು ಅರ್ಧದಷ್ಟು ಜನರು ಈಗಾಗಲೇ ಬೇರೆ ಸ್ಥಳಗಳಿಂದ ನಿರ್ವಸಿತರಾಗಿ ಬಂದವರು.

ಈ ವಲಯದಲ್ಲಿ ಇಡೀ ಇದ್ಲಿಬ್ ರಾಜ್ಯ ಹಾಗೂ ನೆರೆಯ ಅಲೆಪ್ಪೊ, ಹಾಮ ಮತ್ತು ಲಟಾಕಿಯ ರಾಜ್ಯಗಳ ಭಾಗಗಳು ಬರುತ್ತವೆ.

ಇದು ಬಂಡುಕೋರ ನಿಯಂತ್ರಣದ ಪ್ರದೇಶವಾಗಿದ್ದು, ಸರಕಾರಿ ಪಡೆಗಳು ಬಾಂಬ್ ದಾಳಿಯನ್ನು ದಿನೇ ದಿನೇ ತೀವ್ರಗೊಳಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News