ವಿದ್ಯುತ್ ಚಾಲಿತ ವಾಹನಗಳ ಜಿಎಸ್‌ಟಿ ದರ ಇಳಿಕೆ

Update: 2019-07-27 08:39 GMT

ಹೊಸದಿಲ್ಲಿ, ಜು.27: ವಿದ್ಯುತ್ ಚಾಲಿತ ವಾಹನಗಳ ಜಿಎಸ್‌ಟಿ ದರವನ್ನು ಶೇ.12ರಿಂದ 5ರ ತನಕ ಇಳಿಸಲು ಜಿಎಸ್‌ಟಿ ಕೌನ್ಸಿಲ್ ಶನಿವಾರ ನಿರ್ಧರಿಸಿದೆ.

 ವಿದ್ಯುತ್ ಚಾಲಿತ ವಾಹನಗಳಲ್ಲಿ ಬಳಸುವ ಚಾರ್ಜರ್‌ಗಳ ಜಿಎಸ್‌ಟಿ ದರವನ್ನು ಶೇ.18ರಿಂದ 5ಕ್ಕೆ ಇಳಿಸಲು ನಿರ್ಧರಿಸಲಾಗಿದ್ದು, ದರ ಇಳಿಕೆಯು ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು 36ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸ್ಥಳೀಯ ಪ್ರಾಧಿಕಾರಿಗಳು ವಿದ್ಯುತ್ ಚಾಲಿತ ಬಸ್‌ಗಳ ಬಾಡಿಗೆ ಪಡೆಯುವುದಕ್ಕೆ ಜಿಎಸ್‌ಟಿಯಿಂದ ವಿನಾಯತಿ ನೀಡುವುದಕ್ಕೂ ಕೌನ್ಸಿಲ್ ಅನುಮತಿ ನೀಡಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News