ಸಿನೆಮಾಕ್ಕಾಗಿ ನಡೆಯಿತು ಹೃತಿಕ್-ಟೆಗರ್ ನಡುವೆ ವಾರ್

Update: 2019-07-28 11:37 GMT

ಹೃತಿಕ್ ರೋಶನ್ ನೃತ್ಯ ಮಾಡಿದನೆಂದರೆ ಆತನಿಗೆ ಸರಿಸಾಟಿ ನಿಲ್ಲುವವರು ಯಾರೂ ಇಲ್ಲ ಎಂಬಂತ ಕಾಲವಿತ್ತು. ಆದರೆ ಬಾಲಿವುಡ್‌ಗೆ ಕಾಲಿಟ್ಟ ಟೈಗರ್ ಶ್ರಾಫ್ ಹೃತಿಕ್‌ಗೇ ಸವಾಲೆಸೆಯುವಂತೆ ಡಾನ್ಸ್ ಮಾಡುತ್ತಾರೆ ಎಂದು ಸಿನೆಮಾರಂಗ ಆಡಲು ಆರಂಭಿಸಿತ್ತು. ಆದರೆ ಇಲ್ಲ, ನಾನು ಹೃತಿಕ್ ಅವರ ನೃತ್ಯವನ್ನೇ ನೋಡಿ ಸ್ಫೂರ್ತಿ ಪಡೆದು ಡಾನ್ಸ್ ಕಲಿತವನು. ನನ್ನ ದೇವರೇ ಹೃತಿಕ್ ರೋಶನ್ ಎಂದು ಹೇಳುವ ಮೂಲಕ ಟೈಗರ್ ಎಲ್ಲ ಟೀಕೆ ಟಿಪ್ಪಣಿಗಳಿಗೂ ಪರದೆಯೆಳೆದಿದ್ದರು.

ಸದ್ಯ ಸಿದ್ಧಾರ್ಥ್ ಆನಂದ್ ಎಂಬ ನಿರ್ದೇಶಕ ಈ ಇಬ್ಬರು ಡಾನ್ಸ್ ದಿಗ್ಗಜರನ್ನು ಪರದೆಯ ಮೇಲೆ ಜೊತೆಯಾಗಿ ಕಾಣಿಸುವ ಸಿನೆಮಾವನ್ನು ತಯಾರಿಸುತ್ತಿದ್ದಾರೆ. ಆ ಸಿನೆಮಾದ ಹೆಸರು ವಾರ್.

ವಾರ್ ಚಿತ್ರದಲ್ಲಿ ಹೃತಿಕ್ ಮತ್ತು ಟೈಗರ್ ಪರಸ್ಪರ ಹೊಡೆದಾಡಿಕೊಳ್ಳಲಿದ್ದಾರೆ, ನೃತ್ಯ ಮಾಡಲಿದ್ದಾರೆ ಜೊತೆಗೆ ಬೈಕ್ ರೇಸ್ ಕೂಡಾ ಮಾಡಲಿದ್ದಾರೆ.

ಈ ಸಿನೆಮಾಕ್ಕಾಗಿ ಈ ಜೋಡಿ ಪೋರ್ಚುಗಲ್‌ನ ಅತ್ಯಂತ ಎತ್ತರದ ಪರ್ವತ ಸೆರ್ರ ಡ ಎಸ್ಟ್ರೆಲದ ತುತ್ತತುದಿಯಲ್ಲಿ ಸೂಪರ್ ಬೈಕ್‌ಗಳಲ್ಲಿ ಅತ್ಯಂತ ವೇಗವಾಗಿ ಚೇಸ್ ಮಾಡುವ ದೃಶ್ಯವನ್ನು ಇತ್ತೀಚೆಗಷ್ಟೇ ಚಿತ್ರೀಕರಿಸಿದೆ.

ನಿರ್ದೇಶಕ ಸಿದ್ಧಾರ್ಥ್ ಆನಂದ್ ಹೇಳುವಂತೆ, ಇಡೀ ಸಿನೆಮಾದಲ್ಲಿ ಹೃತಿಕ್ ಮತ್ತು ಟೈಗರ್ ನಡುವೆ ನಿರಂತರ ಸ್ಪರ್ಧೆ ನಡೆಯುತ್ತಲೇ ಇರುತ್ತದೆ ಮತ್ತು ಇದು ಪ್ರೇಕ್ಷಕರು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಲಿದೆ.

ಉಳಿದಂತೆ ವಾರ್‌ನಲ್ಲಿ ಆಶುತೋಶ್ ರಾಣಾ, ಅನುಪ್ರಿಯಾ ಗೋಯೆಂಕಾ ಮತ್ತು ದೀಪನ್ನಿತ ಶರ್ಮಾ ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News