ಕೇಂದ್ರವು ಭ್ರಷ್ಟರಿಗೆ ನೆರವಾಗಲು ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸಿದೆ:ರಾಹುಲ್ ಗಾಂಧಿ

Update: 2019-07-28 14:30 GMT

ಹೊಸದಿಲ್ಲಿ,ಜು.28: ಸಂಸತ್ತಿನ ಮೂಲಕ ಮಾಹಿತಿ ಹಕ್ಕು(ಆರ್‌ಟಿಐ) ಕಾಯ್ದೆಗೆ ತಿದ್ದುಪಡಿಗಳನ್ನು ತಂದಿರುವುದಕ್ಕಾಗಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಅದು ಈ ಪಾರದರ್ಶಕ ಕಾನೂನನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

 ಆರ್‌ಟಿಐ ಕಾಯ್ದೆಗೆ ಸರಕಾರವು ಮಂಡಿಸಿದ್ದ ತಿದ್ದುಪಡಿಗಳನ್ನು ಲೋಕಸಭೆ ಸೋಮವಾರ ಮತ್ತು ರಾಜ್ಯಸಭೆ ಗುರುವಾರ ಅಂಗೀಕರಿಸಿವೆ. ಪರಿಷ್ಕೃತ ಕಾಯ್ದೆಯು ಮಾಹಿತಿ ಆಯುಕ್ತರ ವೇತನ,ಅಧಿಕಾರಾವಧಿ ಮತ್ತು ನೇಮಕಾತಿಯ ಇತರ ಷರತ್ತುಗಳು ಹಾಗೂ ನಿಬಂಧನೆಗಳನ್ನು ನಿಗದಿಗೊಳಿಸಲು ಸರಕಾರಕ್ಕೆ ಅಧಿಕಾರವನ್ನು ನೀಡಿದೆ.

‘ಭ್ರಷ್ಟರು ಭಾರತವನ್ನು ಲೂಟಿ ಮಾಡಲು ನೆರವಾಗುವುದಕ್ಕಾಗಿ ಆರ್‌ಟಿಐ ಕಾಯ್ದೆಯನ್ನು ಸರಕಾರವು ದುರ್ಬಲಗೊಳಿಸುತ್ತಿದೆ’ ಎಂದು ‘ಸರಕಾರವು ಆರ್‌ಟಿಐ ಕಗ್ಗೊಲೆ ಮಾಡುತ್ತಿದೆ ’ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟಿಸಿರುವ ರಾಹುಲ್,‘ಸಾಮಾನ್ಯವಾಗಿ ಭ್ರಷ್ಟಾಚಾರದ ವಿರುದ್ಧ ಆಕ್ರೋಶದಿಂದ ಪ್ರತಿಭಟಿಸುತ್ತಿದ್ದ ಗುಂಪು ಇದ್ದಕ್ಕಿದ್ದಂತೆ ಮಾಯವಾಗಿರುವುದು ಅಚ್ಚರಿಯನ್ನುಂಟು ಮಾಡಿದೆ ’ ಎಂದಿದ್ದಾರೆ.

ಆರ್‌ಟಿಐ ಕಾಯ್ದೆ ಅಳಿವಿನಂಚಿನಲ್ಲಿದೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಕಳವಳ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News