×
Ad

ಅಮೆರಿಕದಲ್ಲಿ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ ಗೆದ್ದ ಮರಳು ಶಿಲ್ಪ ಕಲಾವಿದ ಪಟ್ನಾಯಕ್

Update: 2019-07-28 20:54 IST

ನ್ಯೂಯಾರ್ಕ್,ಜು.28: ಖ್ಯಾತ ಭಾರತೀಯ ಮರಳು ಶಿಲ್ಪ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಸುದರ್ಶನ ಪಟ್ನಾಯಕ್ ಅವರು ಅಮೆರಿಕದಲ್ಲಿಯ ಪ್ರತಿಷ್ಠಿತ ಮರಳು ಕಲಾಕೃತಿಗಳ ಉತ್ಸವದಲ್ಲಿ ‘ಪೀಪಲ್ಸ್ ಚಾಯ್ಸ್ ’ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಮಹಾಸಾಗರಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಟದ ಸಂದೇಶ ಸಾರುವ ಅವರ ಕಲಾಕೃತಿ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.

ಮಸಾಚುಸೆಟ್ಸ್‌ನ ಬಾಸ್ಟನ್‌ನಲ್ಲಿ 2019ರ ರಿವರ್ ಬೀಚ್ ಇಂಟರ್‌ನ್ಯಾಷನಲ್ ಸ್ಯಾಂಡ್ ಸ್ಕಲ್ಪ್ಟಿಂಗ್ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತದಿಂದ ಆಯ್ಕೆಯಾದ 15 ಅಗ್ರ ಮರಳು ಶಿಲ್ಪ ಕಲಾವಿದರಲ್ಲಿ ಒಬ್ಬರಾಗಿರುವ ಪಟ್ನಾಯಕ್,ತನ್ನ ‘ಪ್ಲಾಸ್ಟಿಕ್ ಮಾಲಿನ್ಯವನ್ನು ನಿಲ್ಲಿಸಿ,ನಮ್ಮ ಮಹಾಸಾಗರಗಳನ್ನು ರಕ್ಷಿಸಿ ’ ಮರಳು ಶಿಲ್ಪಕ್ಕಾಗಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

‘ ಇದು ಅಮರಿಕದಲ್ಲಿ ನನಗೆ ಸಂದಿರುವ ಅತ್ಯಂತ ದೊಡ್ಡ ಪ್ರಶಸ್ತಿ ಮತ್ತು ಗೌರವವಾಗಿದೆ. ಇದು ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯಲು ಮತ್ತು ಈ ಮಹತ್ವದ ವಿಷಯದಲ್ಲಿ ಅರಿವು ಮೂಡಿಸಲು ಶ್ರಮಿಸುತ್ತಿರುವ ಭಾರತಕ್ಕೂ ಸಂದಿರುವ ಪ್ರಶಸ್ತಿಯಾಗಿದೆ ’ ಎಂದು ಪಟ್ನಾಯಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News