×
Ad

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ: ಪ್ರತ್ಯಕ್ಷದರ್ಶಿ ಹೇಳಿದ್ದೇನು ಗೊತ್ತಾ ?

Update: 2019-07-31 22:18 IST

ರಾಯ್‌ಬರೇಲಿ, ಜು. 31: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿಗೆ ತಪ್ಪು ದಿಕ್ಕಿನಿಂದ ವೇಗವಾಗಿ ಆಗಮಿಸಿದ ಟ್ರಕ್ ಢಿಕ್ಕಿ ಹೊಡೆಯಿತು ಎಂದು ಅಪಘಾತದ ಪ್ರತ್ಯಕ್ಷ ಸಾಕ್ಷಿ ಅರ್ಜುನ್ ಯಾದವ್ ತಿಳಿಸಿದ್ದಾರೆ.

‘‘ಟ್ರಕ್ ತಪ್ಪು ಭಾಗದಲ್ಲಿ ವೇಗವಾಗಿ ಧಾವಿಸಿತು. ಅಪಘಾತದ ನಂತರ ಟ್ರಕ್ ಚಾಲಕ ಹಾಗೂ ಕ್ಲೀನರ್ ವಾಹನ ಬಿಟ್ಟು ಸ್ಥಳದಿಂದ ಪರಾರಿಯಾದರು’’ ಎಂದು ಅಪಘಾತ ನಡೆದ ಸ್ಥಳವಾದ ಪೋರೆ ದೌಲಿ ಕ್ರಾಸಿಂಗ್‌ನಲ್ಲಿ ಅಂಗಡಿ ನಡೆಸುತ್ತಿರುವ ಯಾದವ್ ಹೇಳಿದ್ದಾರೆ.

“ಆಗ ಮಳೆ ಸುರಿಯುತ್ತಿತ್ತು. ಟ್ರಕ್ ತಪ್ಪು ದಾರಿಯಲ್ಲಿ ವೇಗವಾಗಿ ಧಾವಿಸುತ್ತಿರುವುದನ್ನು ನಾವು ನೋಡಿದೆವು. ಪೋರೆ ದೌಲಿ ಕ್ರಾಸಿಂಗ್‌ನಲ್ಲಿ ತಿರುವು ಇದೆ. ಟ್ರಕ್ ಚಾಲಕ ತಪ್ಪು ಬದಿಯಲ್ಲಿ ಇದ್ದ. ಕೂಡಲೇ ಆತ ಟ್ರಕ್ ಅನ್ನು ರಸ್ತೆಯ ಇನ್ನೊಂದು ಬದಿಗೆ ತಿರುಗಿಸಿದೆ. ಇದರಿಂದ ಎದುರಿನಿಂದ ಬಂದ ಕಾರಿಗೆ ಮುಖಾಮುಖಿ ಢಿಕ್ಕಿಯಾಯಿತು” ಎಂದು ಅವರು ತಿಳಿಸಿದ್ದಾರೆ.

ಟ್ರಕ್ ಕಾರನ್ನು 10 ಮೀಟರ್ ದೂರ ಎಳೆದೊಯ್ದು ನಿಂತಿತು. ನಾವು ಸ್ಥಳಕ್ಕೆ ಧಾವಿಸುವ ಮೊದಲೇ ಟ್ರಕ್ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದರು. ಕಾರಿನಲ್ಲಿದ್ದ ಗಾಯಗೊಂಡವರನ್ನು ರಕ್ಷಿಸಲು ಎಲ್ಲರೂ ಪ್ರಯತ್ನಿಸಿದರು ಯಾರೂ ಚಾಲಕ ಹಾಗೂ ಕ್ಲೀನರ್‌ನನ್ನು ಹಿಡಿಯಲು ಪ್ರಯತ್ನಿಸಲಿಲ್ಲ ಎಂದು ಯಾದವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News