ಜಲಿಯನ್‌ವಾಲಾ ಬಾಗ್ ತಿದ್ದುಪಡಿ ಮಸೂದೆ ಅಂಗೀಕಾರ

Update: 2019-08-02 17:34 GMT

ಹೊಸದಿಲ್ಲಿ, ಅ. 2: ಟ್ರಸ್ಟ್‌ನ ಖಾಯಂ ಸದಸ್ಯರಾಗಿರುವ ಕಾಂಗ್ರೆಸ್ ಅಧ್ಯಕ್ಷನನ್ನು ವಜಾಗೊಳಿಸುವ ಜಲಿಯನ್‌ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆಯನ್ನು ಕಾಂಗ್ರೆಸ್‌ನ ತೀವ್ರ ಪ್ರತಿಭಟನೆ ನಡುವೆ ಶುಕ್ರವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

ಕಾಂಗ್ರೆಸ್‌ನ ಅಧ್ಯಕ್ಷ ಟ್ರಸ್ಟಿ ಎಂದು ಉಲ್ಲೇಖಿಸಿರುವುದನ್ನು ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆ ತೆಗೆದು ಹಾಕಲಿದೆ. ಕಾಂಗ್ರೆಸ್ ಸದಸ್ಯರ ಸಭಾ ತ್ಯಾಗದ ನಡುವೆಯೂ ಮಸೂದೆ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತು. ಅದಕ್ಕಿಂತ ಮೊದಲು ಪ್ರತಿಪಕ್ಷಗಳು ಮಂಡಿಸಿದ ತಿದ್ದುಪಡಿಯನ್ನು ಮತಗಳ ಮೂಲಕ ತಿರಸ್ಕರಿಸಲಾಯಿತು.

ಮಸೂದೆ ಮಂಡಿಸಿದ ಕೇಂದ್ರ ಸಾಂಸ್ಕೃತಿಕ ಸಚಿವ ಪ್ರಹ್ಲಾದ್ ಪಟೇಲ್, ರಾಷ್ಟ್ರೀಯ ಸ್ಮಾರಕಗಳು ರಾಜಕೀಯ ಸ್ಮಾರಕಗಳಾಗಲು ಸಾಧ್ಯವಿಲ್ಲ ಎಂದರು. ಲೋಕಸಭೆಯ ಏಕೈಕ ಅತಿ ದೊಡ್ಡ ಪಕ್ಷ ಟ್ರಸ್ಟ್‌ನ ಸದಸ್ಯರಾಗುವ ಅವಕಾಶವನ್ನು ಈ ತಿದ್ದುಪಡಿ ಮಸೂದೆ ಅವಕಾಶ ಮಾಡಿ ಕೊಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News