ಮೂರನೇ ತೈಲ ಟ್ಯಾಂಕರ್ ವಶಪಡಿಸಿಕೊಂಡ ಇರಾನ್

Update: 2019-08-05 17:08 GMT

ಜಿದ್ದಾ (ಸೌದಿ ಅರೇಬಿಯ), ಆ. 5: ಇರಾನ್ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಅರೇಬಿಯನ್ ಕೊಲ್ಲಿಯಲ್ಲಿ ಮೂರನೇ ವಿದೇಶಿ ತೈಲ ಟ್ಯಾಂಕರನ್ನು ವಶಪಡಿಸಿಕೊಂಡಿದೆ.

ಫಾರ್ಸಿ ದ್ವೀಪದ ಸಮೀಪ ಬುಧವಾರ ರಾತ್ರಿ ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ)ನ ಸೈನಿಕರು ತೈಲ ಟ್ಯಾಂಕರನ್ನು ಏರಿದರು. ಸಣ್ಣ ತೈಲ ಟ್ಯಾಂಕರ್ ಸುಮಾರು 7 ಲಕ್ಷ ಲೀಟರ್ ಕಳ್ಳತನದ ತೈಲವನ್ನು ಸಾಗಿಸುತ್ತಿತ್ತು ಎಂದು ಐಆರ್‌ಜಿಸಿ ರವಿವಾರ ತಿಳಿಸಿದೆ. ಫಾರ್ಸಿ ದ್ವೀಪದಲ್ಲಿ ಇರಾನ್ ಸೇನಾ ನೆಲೆ ಹೊಂದಿದೆ.

ಈ ಕಾರ್ಯಾಚರಣೆಯ ವೇಳೆ ಏಳು ಮಂದಿ ವಿದೇಶಿ ನಾವಿಕ ಸಿಬ್ಬಂದಿಯನ್ನು ಅದು ಬಂಧಿಸಿದೆ. ತೈಲ ಟ್ಯಾಂಕರ್‌ನ ಗುರುತು ಮತ್ತು ಸಿಬ್ಬಂದಿಯ ರಾಷ್ಟ್ರೀಯತೆಯನ್ನು ಅದು ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News