ಸ್ವರಾಜ್ ವಿಶೇಷ ವ್ಯಕ್ತಿತ್ವದ ಮಹಿಳೆಯಾಗಿದ್ದರು:ವಿಶ್ವಸಂಸ್ಥೆ
Update: 2019-08-07 20:07 IST
ಹೊಸದಿಲ್ಲಿ, ಆ.7: ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷೆ ಮಾರಿಯಾ ಫೆರ್ನಾಂಡಾ ಎಸ್ಪಿನೋಸಾ ಅವರು,ಸ್ವರಾಜ್ ಅವರು ವಿಶೇಷ ವ್ಯಕ್ತಿತ್ವದ ಮಹಿಳೆಯಾಗಿದ್ದರು ಮತ್ತು ತನ್ನ ಜೀವನವನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿಕೊಂಡಿದ್ದರು ಎಂದು ಬಣ್ಣಿಸಿದ್ದಾರೆ. ‘ ಸ್ವರಾಜ್ ನಿಧನದ ಸುದ್ದಿ ದುಃಖವನ್ನುಂಟು ಮಾಡಿದೆ. ನಾನು ಭಾರತಕ್ಕೆ ಭೇಟಿ ನೀಡಿದಾಗೆಲ್ಲ ಅವರನ್ನು ಭೇಟಿಯಾಗುವ ಗೌರವ ನನ್ನದಾಗಿತ್ತು. ಅವರು ಸದಾ ನನ್ನ ನೆನಪಿನಲ್ಲಿರುತ್ತಾರೆ ’ಎಂದೂ ಎಸ್ಪಿನೋಸಾ ಟ್ವೀಟಿಸಿದ್ದಾರೆ.