ಸುಶ್ಮಾ ಸ್ವರಾಜ್‌ಗೆ ಪತಿ,ಪುತ್ರಿಯಿಂದ ಅಂತಿಮ ಸೆಲ್ಯೂಟ್
Update: 2019-08-07 20:13 IST
ಹೊಸದಿಲ್ಲಿ, ಆ.7: ಹೃದಯಾಘಾತದಿಂದ ನಿಧನರಾದ ಮಾಜಿ ಕೇಂದ್ರ ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ದುಃಖತಪ್ತ ದೇಶವು ಬುಧವಾರ ಅಂತಿಮ ವಿದಾಯವನ್ನು ಕೋರಿತು. ತಮ್ಮ ನೆಚ್ಚಿನ ನಾಯಕಿಗೆ ಅಂತಿಮ ನಮನಗಳನ್ನು ಸಲ್ಲಿಸಲು ಬೆಳಿಗ್ಗೆಯಿಂದಲೇ ಸಾವಿರಾರು ಜನರು ಸ್ವರಾಜ್ ನಿವಾಸ ಮತ್ತು ಬಿಜೆಪಿ ಕಚೇರಿಗೆ ಹರಿದುಬರುತ್ತಲೇ ಇದ್ದರು. ಅಂತಿಮ ಯಾತ್ರೆ ಆರಂಭಗೊಳ್ಳುವ ಕೆಲವೇ ನಿಮಿಷಗಳ ಮುನ್ನ ಸರಕಾರಿ ಗೌರವಗಳು ಸಲ್ಲಿಕೆಯಾಗುತ್ತಿದ್ದಾಗ ಪತಿ ಸ್ವರಾಜ್ ಕೌಶಲ್ ಮತ್ತು ಪುತ್ರಿ ಬಾನ್ಸುರಿ ಸ್ವರಾಜ್ ಅವರು ಸೆಲ್ಯೂಟ್ ಹೊಡೆದು ತಮ್ಮನ್ನಗಲಿದ ಪ್ರೀತಿಯ ಜೀವಕ್ಕೆ ಅಂತಿಮ ನಮನವನ್ನು ಸಲ್ಲಿಸಿದರು.