ಪತ್ನಿಯ ಆತ್ಮಹತ್ಯೆ : ‘ಬಾಹುಬಲಿ' ನಟನ ಬಂಧನ

Update: 2019-08-08 10:28 GMT

ಹೈದರಾಬಾದ್, ಆ.8: ಪತ್ನಿಯ  ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಾಹುಬಲಿ ಚಲನಚಿತ್ರದ ನಟ ಮಧು ಪ್ರಕಾಶ್ ಅವರ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದಾರೆ.

ಮಧು ಅವರ ಪತ್ನಿ ಭಾರತಿ ಮಂಗಳವಾರ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತಂತೆ ಆಕೆಯ ತಂದೆ ಪೊಲೀಸ್ ದೂರು ದಾಖಲಿಸಿ ಪ್ರಕಾಶ್ ತಮ್ಮ ಪುತ್ರಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು, ಆಗಾಗ ಹೊಡೆಯುತ್ತಿದ್ದರು ಎಂದು ಆರೋಪಿಸಿದ್ದರಲ್ಲದೆ ಕಿರುಕುಳದಿಂದಾಗಿಯೇ ಮಗಳು ಆತ್ಮಹತ್ಯೆಗೈದಿದ್ದಾಳೆಂದು ದೂರಿದ್ದರು.

`ಬಾಹುಬಲಿ' ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದು ಮಧು 2015ರಲ್ಲಿ ಭಾರತಿಯನ್ನು ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News