ಮಲಪ್ಪುರಂನಲ್ಲಿ ಭೂ ಕುಸಿತ: 80 ಮಂದಿ ನಾಪತ್ತೆ
Update: 2019-08-10 10:17 IST
ಕೊಚ್ಚಿ,ಆ.10: ಕೇರಳದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮಲ್ಲಪ್ಪುರಂನ ಕಾವಾಲಪ್ಪಾರ ಎಂಬಲ್ಲಿ ಭೂ ಕುಸಿತದ ಪರಿಣಾಮವಾಗಿ 80 ಮಂದಿ ನಾಪತ್ತೆಯಾಗಿದ್ದಾರೆ. ಕಾರ್ಯಾಚರಣೆಯ ತಂಡ ಶನಿವಾರ ಆಗಮಿಸಿದೆ.
ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಲ್ಲಿ ಮಳೆ, ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿದೆ.
ಇಂಡಿಯನ್ ಕೋಸ್ಟ್ ಗಾರ್ಡ್‌ನ ವಿಪತ್ತು ನಿರ್ವಹಣಾ 43 ತಂಡಗಳು ಪ್ರವಾಹಪೀಡಿತ ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಜಿಲ್ಲೆಗಳಿಗೆ ತೆರಳಿ ಕಾಯಾಚರಣೆ ನಡೆಸುತ್ತಿದೆ.