ಜಮ್ಮು-ಕಾಶ್ಮೀರ: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಾಂಡೆ, ಪತ್ನಿಗೆ ಗೃಹಬಂಧನ,ಬಿಡುಗಡೆ

Update: 2019-08-11 16:00 GMT

ಲಕ್ನೋ, ಆ.11:  ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ವಿಧಿ 370ರ ರದ್ದತಿಯನ್ನು ವಿರೋಧಿಸಿ ರವಿವಾರ ಸಂಜೆ ಇಲ್ಲಿಯ ಹಝರತ್‌ಗಂಜ್‌ನ ಗಾಂಧಿ ಪ್ರತಿಮೆಯ ಎದುರು ಮೊಂಬತ್ತಿ ಬೆಳಕಿನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಸಾಮಾಜಿಕ ಕಾರ್ಯಕರ್ತರಾದ ‘ಮ್ಯಾಗ್ಸೆಸೆ ಪ್ರಶಸ್ತಿ’ ಪುರಸ್ಕೃತ ಸಂದೀಪ ಪಾಂಡೆ ಮತ್ತು ಅವರ ಪತ್ನಿ ಅರುಂಧತಿ ಧುರು ಅವರನ್ನು ಪೊಲೀಸರು ಕೆಲವು ಗಂಟೆಗಳ ಕಾಲ ಗೃಹಬಂಧನದಲ್ಲಿರಿಸಿದ್ದರು.

‘ಬೆಳಗ್ಗೆ ಏಕಾಏಕಿ ನಾಲ್ಕು ವ್ಯಾನ್‌ಗಳಲ್ಲಿ ನಮ್ಮ ಮನೆಗೆ ಬಂದಿದ್ದ ಪೊಲೀಸರು ಬಕ್ರೀದ್ ಪ್ರಯುಕ್ತ ಆ.15ರವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಯನ್ನು ನಡೆಸುವಂತಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ನಿಷೇಧಾಜ್ಞೆ ಹಿಂದೆಗೆದುಕೊಂಡ ಬಳಿಕ ನಾವು ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ನಾನು ಅವರಿಗೆ ತಿಳಿಸಿದ್ದೆ . ಆದರೆ ಸಂಜೆ ನಾಲ್ಕು ಗಂಟೆಯವರೆಗೆ ಪೊಲೀಸರು ನಮ್ಮನ್ನು ಗೃಹಬಂಧನದಲ್ಲಿರಿಸಿದ್ದರು ’ ಎಂದು ಪಾಂಡೆ ತಿಳಿಸಿದರು. ಧುರು ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್‌ನ ರಾಷ್ಟ್ರೀಯ ಸಂಚಾಲಕಿಯಾಗಿದ್ದಾರೆ.

‘ಆ.16ರಂದು ಪ್ರತಿಭಟನೆಯನ್ನು ನಡೆಸಲು ನಾವೀಗ ನಿರ್ಧರಿಸಿದ್ದೇವೆ,ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡುವ ಸಾಧ್ಯತೆಗಳು ಕಾಣುತ್ತಿಲ್ಲ. ಏನೇ ಆದರೂ ನಾವು ಪ್ರತಿಭಟನೆ ನಡಸುತ್ತೇವೆ,ಬಂಧನಕ್ಕೂ ನಾವು ಸಿದ್ಧರಾಗಿದ್ದೇವೆ ’ಎಂದು ಪಾಂಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News