‘ಪ್ರಜಾಪ್ರಭುತ್ವಕ್ಕೆ ವಿರುದ್ಧ’: 370ನೇ ವಿಧಿ ರದ್ದತಿ ಬಗ್ಗೆ ವಿಜಯ್ ಸೇತುಪತಿ ಪ್ರತಿಕ್ರಿಯೆ

Update: 2019-08-13 08:37 GMT

ಚೆನ್ನೈ, ಆ.13: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕಾಶ್ಮೀರಿಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಖ್ಯಾತ ನಟ ವಿಜಯ್ ಸೇತುಪತಿ ಟೀಕಿಸಿದ್ದಾರೆ.

ರೇಡಿಯೋ ವಾಹಿನಿ ಎಸ್‍ ಬಿಎಸ್ ತಮಿಳ್ ಆಸ್ಟ್ರೇಲಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, “ಸರಕಾರದ ಕ್ರಮ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಪೆರಿಯಾರ್ ಈ ಬಗ್ಗೆ ಈ  ಹಿಂದೆಯೇ ಮಾತನಾಡಿದ್ದಾರೆ. ನಾನು ಇನ್ನೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಬಹುದೇ ?, ಇನ್ನೊಬ್ಬರ ಕುರಿತು ಕಾಳಜಿಯಿರುವುದನ್ನು ಒಬ್ಬರು ತೋರ್ಪಡಿಸಬಹುದು. ಆದರೆ ಇನ್ನೊಬ್ಬರ ಮೇಲೆ ತಮ್ಮ ನಿರ್ಧಾರಗಳನ್ನು ಹೇರುವ ಹಾಗಿಲ್ಲ, ಈ ಕ್ರಮ ನನಗೆ ನೋವುಂಟು ಮಾಡಿದೆ''  ಎಂದಿದ್ದಾರೆ.

ಮೆಲ್ಬೋರ್ನ್ ನಲ್ಲಿ ಭಾರತೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ತೆರಳಿದ್ದ ನಟ ಅಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೇತುಪತಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಅವರನ್ನು ಬೆಂಬಲಿಸಿದರೆ ಇನ್ನು ಕೆಲವರು ಅವರ ಅಭಿಪ್ರಾಯಗಳನ್ನು ವಿರೋಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News