ಕಾರವಾರಕ್ಕೆ ಬಂದಿದ್ದ ಬಾಪು

Update: 2019-08-15 05:13 GMT

ಭಾರತವು ಬ್ರಿಟಿಷರ ಕಪಿಮುಷ್ಠಿಯಲ್ಲಿ ಇದ್ದಾಗ ದೇಶಕ್ಕೆ ಸ್ವಾತಂತ್ರ್ಯ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕಾರವಾರಕ್ಕೆ ಬಂದಿದ್ದ ನೆನಪು ಇನ್ನು ಹಸನಾಗಿದೆ. 84 ವರ್ಷಗಳ ಹಿಂದೆ ಅವರು ಬಂದಿದ್ದ ಹೆಜ್ಜೆ ಗುರುತುಗಳನ್ನು ರಕ್ಷಿಸುವ ಕಾರ್ಯವನ್ನು ಕಾರವಾರದ ಹಳದೀಪುರಕರ್ ಅವರ ಕುಟುಂಬ ಕಳೆದ ಎಂಟು ದಶಕಗಳಿಂದ ಮಾಡಿಕೊಂಡು ಬರುತ್ತಿದೆ.

ಮಹಾತ್ಮಾ ಗಾಂಧೀಜಿ ಕಾರವಾರಕ್ಕೆ ಆಗಮಿಸಿದಾಗ ಇಲ್ಲಿನ ಹಳದೀಪುರಕರ್ ಅವರ ಮನೆಯಲ್ಲಿ ಆತಿಥ್ಯ ಪಡೆದಿದ್ದರು. ಅದೇ ಗೌರವದಿಂದ ಅವರ ಕುಟುಂಬ ಇಂದಿಗೂ ಅವರ ಮನೆಯಲ್ಲಿ ಗಾಂಧೀಜಿ ಅವರು ಬಂದಿದ್ದ ಸಂದರ್ಭದ ಪೋಟೊಗಳು, ಸ್ಮರಣಿಕೆಗಳನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಹಳದೀಪುರಕರ್ ಮನೆ ಮಾತ್ರವೇ ಗಾಂಧೀಜಿ ಕಾರವಾರಕ್ಕೆ ಬಂದಿರುವುದಕ್ಕಿರು ಕುರುಹು.

120ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಹಳದೀಪುರಕರ್ ಕುಟುಂಬದ ಮನೆಗೆ 1934 ಫೆೆ. 27 ರಂದು ಮಹಾತ್ಮಾ ಗಾಂಧೀಜಿ ಉಡುಪಿಯಿಂದ ಕಾರವಾರಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಕಾರವಾರ ಮುನ್ಸಿಪಾಲಿಟಿಯ ಆಗಿನ ಅಧ್ಯಕ್ಷ ಪಿ. ಎಸ್. ಮುಜುಂದಾರ್, ಹಿಂದು ಮಹಾಸಭಾದ ಅಧ್ಯಕ್ಷ ಎಂ. ಬಿ. ಬೋರ್ಕರ್. ಉದ್ಯಮಿ ಕೆ. ಆರ್. ಹಳದೀಪುರಕರ್ ಹಾಗೂ ಹೊರ ಜಿಲ್ಲೆಗಳ ಹಲವು ಗಣ್ಯರು ಗಾಂಧೀಜಿ ಅವರನ್ನು ಕುಂದಾಪುರದಿಂದ ಜಿಲ್ಲೆಗೆ ಸ್ವಾಗತಿಸಿ ಕರೆತಂದಿದ್ದರು.
ಹಳದೀಪುರಕರ್ ಅವರ ಮನೆಯ ಆವರಣದಲ್ಲಿ ಅಂದು ಬೆಳಗ್ಗೆ ಪ್ರಾರ್ಥನೆ ನಡೆಸಿದ್ದರು. ಈಗ ನೌಕರರ ವಸತಿ ಸಂಕೀರ್ಣ ಇರುವ ಜಾಗದಲ್ಲಿ ಸಾರ್ವಜನಿಕ ಸಭೆ ನಡೆಸಿ, ಭಾರತದ ಸ್ವಾತಂತ್ರ್ಯ ಹಾಗೂ ಅಸ್ಪಶ್ಯತೆಯ ಕುರಿತು ಮಾತನಾಡಿದ್ದರು. ಸುಮಾರು 2 ಸಾವಿರ ಜನರು ಗಾಂಧೀಜಿ ಅವರ ಭಾಷಣ ಆಲಿಸಿದ್ದರು. ನಂತರ ಅವರಿಗೆ ಜಿಲ್ಲಾ ಸ್ಥಳೀಯ ಆಡಳಿತದಿಂದ ಸಾಗವಾನಿ ಮರದಿಂದ ಮಾಡಿದ  ಾಗೂ ಮುನ್ಸಿಪಾಲಿಟಿಯಿಂದ ಬೆಳ್ಳಿಯ ಸ್ಮರಣಿಕೆ ನೀಡಲಾಯಿತು.
ಅದನ್ನು ಸ್ವೀಕರಿಸದೆ, ಸ್ಥಳದಲ್ಲೇ ಗಾಂಧೀಜಿ ಹರಾಜು ಹಾಕಿದರು. ಅಂದಿನ ದಿನದಲ್ಲಿ ಹಳದೀಪುರಕರ್ ಕುಟುಂಬ ಎರಡನ್ನೂ ಸ್ಮರಣಿಕೆಯನ್ನು 532 ರೂ. ನೀಡಿ ಖರೀದಿಸಿತ್ತು. ಗಾಂಧೀಜಿ ಅವರು ಕಾರವಾರಕ್ಕೆ ಬಂದಾಗಿನ ಚಿತ್ರಗಳು. ಅವರಿಗೆ ನೀಡಿದ ಸ್ಮರಣಿಕೆಗಳು ಇಂದಿಗೂ ಹಳದೀಪುರಕರ್ ಮನೆಯಲ್ಲಿ ವಿಕ್ಷಣೆಗೆ ಲಭ್ಯವಿದೆ. ಗಾಂಧೀಜಿ ಅವರು ಕಾರವಾರಕ್ಕೆ ಬಂದ ನೆನೆಪಿಗೆ ಇಂದಿಗೆ 82 ವರ್ಷ ಕಳೆದಿದ್ದರೂ ಇಲ್ಲಿನ ಜನರಲ್ಲಿ ಇಂದಿಗೂ ಅಚ್ಚಳಿದು ಉಳಿದುಕೊಂಡಿದೆ.

Writer - ಶ್ರೀನಿವಾಸ್ ಬಾಡ್ಕರ್

contributor

Editor - ಶ್ರೀನಿವಾಸ್ ಬಾಡ್ಕರ್

contributor

Similar News