ಡಿ. 8ರಂದು ಸಿಬಿಎಸ್‌ಇ ಸಿಟಿಇಟಿ ಪರೀಕ್ಷೆ

Update: 2019-08-16 17:31 GMT

ಹೊಸದಿಲ್ಲಿ, ಆ. 16: ಸಿಬಿಎಸ್‌ಇ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)ಯ 13ನೇ ಆವೃತ್ತಿಯನ್ನು ಡಿಸೆಂಬರ್ 8ರಂದು ನಡೆಸಲಿದೆ ಎಂದು ಸಿಬಿಎಸ್‌ಇ ತಿಳಿಸಿದೆ. ದೇಶಾದ್ಯಂತದ 110 ನಗರಗಳಲ್ಲಿ 20 ಭಾಷೆಗಳಲ್ಲಿ ಈ ಪರೀಕ್ಷೆ ನಡೆಯಲಿದೆ.

ಪರೀಕ್ಷೆ, ಪಠ್ಯಕ್ರಮ, ಭಾಷೆ, ಅರ್ಹತೆ, ಮಾನದಂಡ, ಪರೀಕ್ಷೆ ಶುಲ್ಕ, ಪರೀಕ್ಷೆ ನಡೆಯುವ ನಗರ ಹಾಗೂ ಪ್ರಮುಖ ದಿನಾಂಕಗಳನ್ನು ಒಳಗೊಂಡ ಮಾಹಿತಿ ಬುಲೆಟಿನ್ ಸಿಟಿಇಟಿಯ ಅಧಿಕೃತ ವೆಬ್‌ಸೈಟ್ (www.ctet.nic.in ) ನಲ್ಲಿ ಆಗಸ್ಟ್ 19ರಿಂದ ಲಭ್ಯವಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಆಗಸ್ಟ್ 19ರಿಂದ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟಂಬರ್ 18. ಪರೀಕ್ಷಾ ಶುಲ್ಕವನ್ನು ಸೆಪ್ಟಂಬರ್ 23 ಅಪರಾಹ್ನ 3.30ರ ವರೆಗೆ ಪಾವತಿಸಬಹುದು ಎಂದು ಸಿಬಿಎಸ್‌ಇ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News