ವೆಸ್ಟ್ ಇಂಡೀಸ್ ತಂಡಕ್ಕೆ ಲಾರಾ, ಸರ್ವನ್ ಸಲಹೆ

Update: 2019-08-16 17:45 GMT

ಆ್ಯಂಟಿಗುವಾ, ಆ.16: ಲೆಜೆಂಡರಿ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಹಾಗೂ ರಾಮನರೇಶ್ ಸರ್ವನ್ ಭಾರತ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮೊದಲುವೆಸ್ಟ್‌ಇಂಡೀಸ್ ತಂಡದೊಂದಿಗೆ ಬೆರೆತು ಅಮೂಲ್ಯ ಸಲಹೆ-ಸೂಚನೆ ನೀಡಲಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಪೈಕಿ ಒಬ್ಬರಾಗಿರುವ ಲಾರಾ ಹಾಗೂ ಕೆರಿಬಿಯನ್‌ನ ಓರ್ವ ಮುಂಚೂಣಿ ಬ್ಯಾಟ್ಸ್ ಮನ್ ಆಗಿದ್ದ ಸರ್ವನ್ ಭಾರತ ವಿರುದ್ಧ ಮೊದಲ ಟೆಸ್ಟ್ ಅರಂಭಕ್ಕೆ ಮೊದಲು ನಡೆಯುವ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಈ ಇಬ್ಬರು ದಿಗ್ಗಜರು 13 ಸದಸ್ಯರ ವಿಂಡೀಸ್ ತಂಡದೊಂದಿಗೆ ತಮ್ಮ ಅಗಾಧ ಜ್ಞಾನ ಹಾಗೂ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಭಾರತ-ವಿಂಡೀಸ್ ಆಗಸ್ಟ್ 22ರಿಂದ 26ರ ತನಕ ಆ್ಯಂಟಿಗುವಾದಲ್ಲಿ ಮೊದಲ ಪಂದ್ಯ ಹಾಗೂ ಆಗಸ್ಟ್ 30ರಿಂದ ಸೆ.3ರ ತನಕ ಜಮೈಕಾದಲ್ಲಿ 2ನೇ ಪಂದ್ಯವನ್ನಾಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News