ದೀಪಾ, ಬಜರಂಗ್‌ಗೆ ಖೇಲ್‌ರತ್ನ, ಜಡೇಜ, ಮುಹಮ್ಮದ್ ಅನಸ್ ಗೆ ಅರ್ಜುನ ಪ್ರಶಸ್ತಿ?

Update: 2019-08-17 13:36 GMT

ಹೊಸದಿಲ್ಲಿ, ಆ.17: ಖ್ಯಾತ ಪ್ಯಾರಾ-ಅಥ್ಲೀಟ್ ದೀಪಾ ಮಲಿಕ್ ಈ ವರ್ಷ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಕುಸ್ತಿಪಟು ಬಜರಂಗ್ ಪೂನಿಯಾ ಜೊತೆ ಜಂಟಿಯಾಗಿ ಸ್ವೀಕರಿಸುವ ಸಾದ್ಯತೆಯಿದೆ.

2016ರ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸುವುದರೊಂದಿಗೆ ಪ್ಯಾರಾಲಿಂಪಿಕ್ಸ್ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಅಥ್ಲೀಟ್ ದೀಪಾ ಮಲಿಕ್. 48ರ ಹರೆಯದ ದೀಪಾರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಆಯ್ಕೆ ಸಮಿತಿ ಶಿಫಾರಸು ಮಾಡಿದೆ.

ಈ ಹಿಂದೆ ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ಸ್ವೀಕರಿಸಿರುವ ದೀಪಾ ತನ್ನ 36ನೇ ವಯಸ್ಸಿನಲ್ಲಿ ಕ್ರೀಡಾಜೀವನ ಆರಂಭಿಸಿದರು. 2016ರ ರಿಯೋ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನಲ್ಲಿ ಶಾಟ್‌ಪುಟ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಜಸ್ಟಿಸ್(ನಿವೃತ್ತ)ಮುಕುಂದಕಮ್ ಶರ್ಮಾ ನೇತೃತ್ವದ 12 ಸದಸ್ಯರನ್ನು ಒಳಗೊಂಂಡ ಆಯ್ಕೆ ಸಮಿತಿಯು ಕ್ರಿಕೆಟಿಗ ರವೀಂದ್ರ ಜಡೇಜ ಸಹಿತ 19 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಕ್ರೀಡಾ ಸಚಿವಾಲಯ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಕಳೆದ ವರ್ಷ ಪ್ರಶಸ್ತಿ ಲಭಿಸದೇ ಇರುವುದಕ್ಕೆ ನ್ಯಾಯಾಲಯದ ಮೆಟ್ಟಿಲೇರುವ ಬೆದರಿಕೆ ಹಾಕಿದ್ದ ಏಶ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಬಜರಂಗ್ ಈ ವರ್ಷ ದೀಪಾ ಜೊತೆಗೆ ಖೇಲ್‌ರತ್ನ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ.

ಸಮಿತಿಯು ಮಾಜಿ ಬ್ಯಾಡ್ಮಿಂಟನ್ ಕೋಚ್ ವಿಮಲ್‌ಕುಮಾರ್ ಸಹಿತ ಮೂವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಿದೆ. ಈ ವರ್ಷದ ಕ್ರೀಡಾ ಪ್ರಶಸ್ತಿಗೆ ಆಯ್ಕೆ ಸಮಿತಿಯು ಶಿಫಾರಸು ಮಾಡಿರುವ ಸಂಪೂರ್ಣ ಪಟ್ಟಿ ಇಂತಿದೆ...

► ರಾಜೀವ್‌ಗಾಂಧಿ ಖೇಲ್‌ರತ್ನ ಪ್ರಶಸ್ತಿ

ಬಜರಂಗ್ ಪೂನಿಯಾ-ಕುಸ್ತಿ

ದೀಪಾ ಮಲಿಕ್-ಪ್ಯಾರಾ ಅಥ್ಲೆಟಿಕ್ಸ್

► ದ್ರೋಣಾಚಾರ್ಯ ಪ್ರಶಸ್ತಿ- ಖಾಯಂ ವಿಭಾಗ ಕೋಚ್

ವಿಮಲ್ ಕುಮಾರ್-ಬ್ಯಾಡ್ಮಿಂಟನ್

ಸಂದೀಪ್ ಗುಪ್ತಾ-ಟೇಬಲ್ ಟೆನಿಸ್

ಮೊಹಿಂದರ್ ಸಿಂಗ್ ದಿಲ್ಲೋನ್-ಅಥ್ಲೆಟಿಕ್ಸ್

► ದ್ರೋಣಾಚಾರ್ಯ ಪ್ರಶಸ್ತಿ-ಜೀವಮಾನ ಸಾಧನೆಯ ವಿಭಾಗ ಕೋಚ್

ಮಿರ್ಝಾಬನ್ ಪಟೇಲ್-ಹಾಕಿ

ರಂಬೀರ್ ಸಿಂಗ್ ಖೋಹರ್-ಕಬಡ್ಡಿ

ಸಂಜಯ್ ಭಾರದ್ವಾಜ್-ಕ್ರಿಕೆಟ್

► ಅರ್ಜುನ ಪ್ರಶಸ್ತಿ ಕ್ರೀಡಾಪಟುಗಳು

ತೇಜಿಂದರ್‌ಪಾಲ್ ಸಿಂಗ್ ತೂರ್-ಅಥ್ಲೆಟಿಕ್ಸ್

ಮುಹಮ್ಮದ್ ಅನಸ್-ಅಥ್ಲೆಟಿಕ್ಸ್

ಎಸ್.ಭಾಸ್ಕರನ್-ದೇಹದಾರ್ಡ್ಯ

ಸೋನಿಯಾ ಲಾಥೆರ್-ಬಾಕ್ಸಿಂಗ್

ರವೀಂದ್ರ ಜಡೇಜ-ಕ್ರಿಕೆಟ್

ಚಿಂಗ್ಲೆಸನಾ ಸಿಂಗ್-ಹಾಕಿ

ಅಜಯ್ ಠಾಕೂರ್-ಕಬಡ್ಡಿ

ಗೌರವ್ ಸಿಂಗ್ ಗಿಲ್-ಮೋಟಾರ್ ಸ್ಪೋರ್ಟ್ಸ್

ಪ್ರಮೋದ್ ಭಗತ್-ಪ್ಯಾರಾ ಸ್ಪೋರ್ಟ್ಸ್(ಬ್ಯಾಡ್ಮಿಂಟನ್)

ಅಂಜುಮ್ ವೌದ್ಗಿಲ್-ಶೂಟಿಂಗ್

ಹರ್ಮೀತ್ ರಾಜುಲ್ ದೇಸಾಯಿ-ಟೇಬಲ್ ಟೆನಿಸ್

ಪೂಜಾ ಧಾಂಡ-ಕುಸ್ತಿ

ಫುವಾದ್ ಮಿರ್ಝಾ-ಕುದುರೆ ಸವಾರಿ

ಗುರುಪ್ರೀತ್ ಸಿಂಗ್ ಸಂಧು-ಫುಟ್ಬಾಲ್

ಪೂನಂ ಯಾದವ್-ಕ್ರಿಕೆಟ್

ಸ್ವಪ್ನಾ ಬರ್ಮನ್-ಅಥ್ಲೆಟಿಕ್ಸ್

ಸುಂದರ್ ಸಿಂಗ್ ಗುರ್ಜರ್-ಪ್ಯಾರಾ ಸ್ಪೋರ್ಟ್ಸ್(ಅಥ್ಲೆಟಿಕ್ಸ್)

ಬಿ.ಸಾಯಿ ಪ್ರಣೀತ್-ಬ್ಯಾಡ್ಮಿಂಟನ್

ಸಿಮ್ರಾನ್ ಸಿಂಗ್ ಶೆರ್ಗಿಲ್-ಪೊಲೊ

► ಧ್ಯಾನ್‌ಚಂದ್ ಪ್ರಶಸ್ತಿ

ಮ್ಯಾನುಯೆಲ್ ಫ್ರೆಡ್ರಿಕ್ಸ್-ಹಾಕಿ

ಅರೂಪ್ ಬಾಸಕ್-ಟೇಬಲ್ ಟೆನಿಸ್ ಮನೋಜ್ ಕುಮಾರ್-ಕುಸ್ತಿ

ನಿತಿನ್ ಕಿರ್ತನೆ-ಟೆನಿಸ್

ಲಾಲ್‌ರೆಂಸಂಗಾ-ಅರ್ಚರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News