ಅಫ್ಘಾನಿಸ್ತಾನಕ್ಕೆ ರಶೀದ್ ಖಾನ್ ನಾಯಕ

Update: 2019-08-20 18:44 GMT

ಕಾಬೂಲ್, ಆ.20: ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಹಾಗೂ ಝಿಂಬಾಬ್ವೆ ಒಳಗೊಂಡ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮಂಗಳವಾರ ಘೋಷಿಸಿದೆ.

ಕಳೆದ ತಿಂಗಳು ನಡೆದ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಒಂದೂ ಪಂದ್ಯವನ್ನು ಗೆಲ್ಲದ ಹಿನ್ನೆಲೆಯಲ್ಲಿ ರಶೀದ್‌ರನ್ನು ಅಫ್ಘಾನ್ ಕ್ರಿಕೆಟ್ ತಂಡದ ನಾಯಕನಾಗಿ ನೇಮಿಸಲಾಗಿತ್ತು. ಗುಲ್ಬದ್ದೀನ್ ನೈಬ್ ವಿಶ್ವಕಪ್‌ನಲ್ಲಿ ಅಫ್ಘಾನ್ ತಂಡದ ನಾಯಕನಾಗಿದ್ದರು.

 ಆಗಸ್ಟ್ 30ರಂದು ಬಾಂಗ್ಲಾದೇಶಕ್ಕೆ ಪ್ರಯಾಣಿಸುವ ಮೊದಲು ಅಫ್ಘಾನ್ ಟೆಸ್ಟ್ ತಂಡ ಬುಧವಾರ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಅಬುಧಾಬಿಗೆ ತೆರಳಲಿದೆ. ಸೆಪ್ಟಂಬರ್ 5ರಿಂದ 9ರ ತನಕ ಬಾಂಗ್ಲಾದೇಶದ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ತ್ರಿಕೋನ ಸರಣಿಯ ವೇಳೆ ಅಫ್ಘಾನ್ ತಂಡ ಸೆ.14ರಂದು ಝಿಂಬಾಬ್ವೆ ವಿರುದ್ಧ ಮೊದಲ ಪಂದ್ಯ, ಸೆ.15ರಂದು ಬಾಂಗ್ಲಾದೇಶದ ವಿರುದ್ಧ 2ನೇ ಪಂದ್ಯ, ಸೆ.20ರಂದು ಝಿಂಬಾಬ್ವೆ ವಿರುದ್ಧ ಮೂರನೇ ಪಂದ್ಯ ಹಾಗೂ ಸೆ.21ರಂದು ಬಾಂಗ್ಲಾದ ವಿರುದ್ಧ ನಾಲ್ಕನೇ ಪಂದ್ಯವನ್ನು ಆಡಲಿದೆ ಹಾಗೂ ಫೈನಲ್ ಪಂದ್ಯವು ಸೆ.24 ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News