ರಕ್ಷಣೆ, ಖನಿಜ ಸಂಪತ್ತು ಸಹಕಾರ ಬಲಪಡಿಸಲು ಭಾರತ, ಝಾಂಬಿಯ ಮಧ್ಯೆ ಒಪ್ಪಂದ

Update: 2019-08-21 15:31 GMT

ಹೊಸದಿಲ್ಲಿ, ಆ.21: ಪ್ರಧಾನಿ ನರೇಂದ್ರ ಮೋದಿ ಮತ್ತು ಝಾಂಬಿಯದ ಅಧ್ಯಕ್ಷ ಎಡ್ಗರ್ ಚಗ್ವ ಲುಂಗು ಮಧ್ಯೆ ನಡೆದ ಸವಿಸ್ತಾರ ಚರ್ಚೆಯ ನಂತರ ಉಭಯ ದೇಶಗಳು ಬುಧವಾರ ರಕ್ಷಣೆ ಮತ್ತು ಖನಿಜ ಸಂಪನ್ಮೂಲ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಒಟ್ಟು ಆರು ಒಪ್ಪಂದಗಳಿಗೆ ಸಹಿ ಹಾಕಿವೆ.

ವ್ಯಾಪಾರ ಮತ್ತು ಹೂಡಿಕೆಯಲ್ಲಿ ಹೆಚ್ಚಳ ಹಾಗೂ ಅಭಿವೃದ್ಧಿ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ಬಗ್ಗೆಯೂ ಉಭಯ ದೇಶಗಳ ನಾಯಕರು ಚರ್ಚೆ ನಡೆಸಿದರು. ನಂತರ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ ಸಹಕಾರದಲ್ಲಿ ವಿಶ್ವಾಸಾರ್ಹ ಜೊತೆಗಾರರಾಗಿರುವ ಝಾಂಬಿಯ ಜೊತೆ ಭಾರತ ತನ್ನ ಅಭಿವೃದ್ಧಿ ಅನುಭವಗಳನ್ನು ಹಂಚಿಕೊಳ್ಳುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ, ಕೃಷಿ, ಆಹಾರ ಸಂಸ್ಕರಣೆ ಹಾಗೂ ಗಣಿಗಾರಿಕೆ ಕ್ಷೇತ್ರಗಳಲ್ಲಿ ಉಭಯ ದೇಶಗಳು ಪರಸ್ಪರ ಭಾಗೀದಾರಿಕೆಯನ್ನು ಹೆಚ್ಚುಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಪ್ರತಿನಿಧಿ ಮಟ್ಟದ ಸಮಾಲೋಚನೆಯ ನಂತರ ಭೂಗೋಳಶಸ್ತ್ರ ಮತ್ತು ಖನಿಜ ಸಂಪನ್ಮೂಲ, ರಕ್ಷಣೆ ಹಾಗೂ ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಸಂಬಂಧಿಸಿದ ಎರಡೂ ದೇಶಗಳ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜೊತೆಗೆ ಇ-ವಿಬಿಎಬಿ (ಇ-ಶಿಕ್ಷಣ)ದ ಕುರಿತು ಹಾಗೂ ಭಾರತೀಯ ಚುನಾವಣಾ ಆಯೋಗ ಮತ್ತು ಝಾಂಬಿಯ ಚುನಾವಣಾ ಆಯೋಗದ ಮಧ್ಯೆಯೂ ಎರಡು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News