ಒಂದು ತಿಂಗಳಲ್ಲಿ ಬಿಜೆಪಿಗೆ 4 ಕೋಟಿ ನೂತನ ಸದಸ್ಯರ ಸೇರ್ಪಡೆ

Update: 2019-08-21 16:39 GMT

ಹೊಸದಿಲ್ಲಿ, ಆ.21: ಬಿಜೆಪಿ ಕೈಗೊಂಡಿರುವ ಸದಸ್ಯತ್ವ ಮಂಗಳವಾರ ಅಂತ್ಯಗೊಂಡಿದ್ದು, ಕಳೆದ ಒಂದು ತಿಂಗಳಲ್ಲೇ 4 ಕೋಟಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. ಇದೀಗ ಪಕ್ಷ 15 ಕೋಟಿ ಸದಸ್ಯರನ್ನು ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜುಲೈ 6ರಂದು ವಾರಾಣಸಿಯಲ್ಲಿ ಪ್ರಧಾನಿ ಮೋದಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ಸದಸ್ಯರ ಪ್ರಮಾಣದಲ್ಲಿ ಶೇ.140ರಷ್ಟು ಹೆಚ್ಚಳವಾಗಿದ್ದು, 35 ಲಕ್ಷ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. ಇದೀಗ ಆ ರಾಜ್ಯದಲ್ಲಿ 60 ಲಕ್ಷ ಬಿಜೆಪಿ ಸದಸ್ಯರಿದ್ದಾರೆ. ಉತ್ತರಪ್ರದೇಶದಲ್ಲಿ 60 ಲಕ್ಷ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದ್ದು, ಒಟ್ಟು ಸದಸ್ಯರ ಸಂಖ್ಯೆ ಒಂದೂವರೆ ಕೋಟಿಗೆ ಏರಿದೆ. 

ನಾವು ಮೊದಲು 2 ಕೋಟಿ ನೂತನ ಸದಸ್ಯರ ಸೇರ್ಪಡೆ ಗುರಿ ಹೊಂದಿದ್ದು ಬಳಿಕ ಅದನ್ನು 5 ಕೋಟಿಗೆ ಪರಿಷ್ಕರಿಸಿದ್ದೆವು. ಈಗಾಗಲೇ 4 ಕೋಟಿ ಸದಸ್ಯರನ್ನು ಸೇರ್ಪಡೆಗೊಳಿಸಿದ್ದೇವೆ. ಆನ್‌ಲೈನ್ ಮೂಲಕ ಮಾಡಲಾಗಿರುವ ನೂತನ ಸದಸ್ಯರನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಆಫ್‌ಲೈನ್ ಮೂಲಕ ಮಾಡಿರುವ ಸದಸ್ಯರನ್ನು ಲೆಕ್ಕಕ್ಕೆ ತೆಗೆದುಕೊಂಡರೆ 5 ಕೋಟಿ ಗುರಿಯನ್ನು ಮೀರುವ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News