ಆರ್ಥಿಕತೆಯು ತೀವ್ರ ಅಧ್ವಾನದಲ್ಲಿರುವುದನ್ನು ಸರಕಾರದ ಸಲಹೆಗಾರರೇ ಒಪ್ಪಿಕೊಂಡಿದ್ದಾರೆ: ರಾಹುಲ್ ಗಾಂಧಿ
Update: 2019-08-23 20:03 IST
ಹೊಸದಿಲ್ಲಿ,ಆ.23: ದೇಶದ ಆರ್ಥಿಕತೆಯು ತೀವ್ರ ಅಧ್ವಾನಗೊಂಡಿದೆ ಎನ್ನುವುದನ್ನು ಸರಕಾರದ ಸಲಹೆಗಾರರೇ ಈಗ ಒಪ್ಪಿಕೊಂಡಿದ್ದಾರೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಅಗತ್ಯವುಳ್ಳವರ ಕೈಗಳಿಗೆ ಹಣ ಸೇರುವಂತೆ ಮಾಡುವ ಮೂಲಕ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸುವಂತೆ ಕೇಂದ್ರಕ್ಕೆ ಸೂಚಿಸಿದ್ದಾರೆ. ‘ ಭಾರತೀಯ ಆರ್ಥಿಕತೆಯು ತೀರ ಅಧ್ವಾನಗೊಂಡಿದೆ ಎಂದು ನಾವು ಹಿಂದಿನಿಂದಲೇ ಎಚ್ಚರಿಕೆ ನೀಡುತ್ತಿದ್ದು,ಕೊನೆಗೂ ಸರಕಾರದ ಸಲಹೆಗಾರರು ಅದನ್ನು ಒಪ್ಪಿಕೊಂಡಿದ್ದಾರೆ. ಈಗ ನಮ್ಮ ಪರಿಹಾರ ಸೂತ್ರವನ್ನು ಒಪ್ಪಿಕೊಳ್ಳಿ ಮತ್ತು ದುರಾಶಾ ಪೀಡಿತರನ್ನು ದೂರವಿಟ್ಟು ಅಗತ್ಯವುಳ್ಳವರ ಕೈಗಳಿಗೆ ಹಣವನ್ನು ಮರಳಿ ನೀಡಿ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸಿ ’ಎಂದು ರಾಹುಲ್ ಶುಕ್ರವಾರ ಟ್ವೀಟ್‌ನಲ್ಲಿ ಹೇಳಿದ್ದಾರೆ.