ವಿಶ್ವಸಂಸ್ಥೆಯ ಮೊದಲ ಯುವ ಹವಾಮಾನ ಶೃಂಗದಲ್ಲಿ ಪಾಲ್ಗೊಳ್ಳಲಿರುವ ವಿಷ್ಣು ಪಿ.ಆರ್.

Update: 2019-08-23 15:56 GMT

 ವಿಶ್ವಸಂಸ್ಥೆ,ಆ.23: ಕೇರಳದ ತಿರುವನಂತಪುರದ ಹವಾಮಾನ ಬದಲಾವಣೆ ಹೋರಾಟಗಾರ ವಿಷ್ಣು ಪಿ.ಆರ್. ಅವರು ವಿಶೇಷ ‘ಗ್ರೀನ್ ಟಿಕೆಟ್’ಗಾಗಿ ವಿಶ್ವಸಂಸ್ಥೆಯು ವಿಶ್ವಾದ್ಯಂತದಿಂದ ಆಯ್ಕೆ ಮಾಡಿರುವ 100 ಅಪ್ರತಿಮ ಹವಾಮಾನ ಹೋರಾಟಗಾರರಲ್ಲಿ ಸೇರಿದ್ದಾರೆ. ಗ್ರೀನ್ ಟಿಕೆಟ್ ಹವಾಮಾನ ಬದಲಾವಣೆಗಾಗಿ ತಮ್ಮ ಪರಿಹಾರೋಪಾಯಗಳನ್ನು ಜಾಗತಿಕ ಮಟ್ಟದಲ್ಲಿ ಮಂಡಿಸಲು ಪ್ರಪ್ರಥಮ ಯುವ ಹವಾಮಾನ ಶೃಂಗದಲ್ಲಿ ಪಾಲ್ಗೊಳ್ಳಲು ಅವರು ವಿಶ್ವಸಂಸ್ಥೆಯ ಕೇಂದ್ರಕಚೇರಿಗೆ ಪ್ರಯಾಣಿಸಲು ನೆರವಾಗಲಿದೆ.

ವಿಷ್ಣು ಅವರು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಚೇಂಜ್ ಕ್ಯಾನ್ ಚೇಂಜ್ ಕ್ಲೈಮೇಟ್ ಚೇಂಜ್ (ಸಿ5) ಫೌಂಡೇಷನ್’ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದಾರೆ.

ತಿರುವನಂತಪುರದಿಂದ ಆರಂಭಿಸಿ ಇಡೀ ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸುಸ್ಥಿರ ಸ್ವಯಂಸೇವಾ ಅಭಿವೃದ್ಧಿ ವೇದಿಕೆಯಾಗಿ ಆರಂಭಗೊಂಡಿದ್ದ ಸಿ5 ಈಗ ಜಿಲ್ಲೆಯಲ್ಲಿ ಹವಾಮಾನ ಬದಲಾವಣೆ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ 10,000ಕ್ಕೂ ಅಧಿಕ ಯುವಜನರನ್ನು ತನ್ನ ಸಹಭಾಗಿಗಳನ್ನಾಗಿ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News