ಬ್ಯಾಂಕ್ ಹಣ ವಂಚನೆ: ಡೆಕ್ಕನ್ ಕ್ರೋನಿಕಲ್ ಕಚೇರಿಗಳಿಗೆ ಇಡಿ ದಾಳಿ; ಐದು ಲಕ್ಷ ರೂ. ಹಳೆನೋಟು ವಶ

Update: 2019-08-23 16:45 GMT

ಹೊಸದಿಲ್ಲಿ,ಆ.23: ಬ್ಯಾಂಕ್‌ಗೆ ಹಲವು ಕೋಟಿ ರೂ. ಸಾಲ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಕ್ಕನ್ ಕ್ರೋನಿಕಲ್ ಹೋಲ್ಡಿಂಗ್ ಲಿ. ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದು ಐದು ಲಕ್ಷ ರೂ. ಮೌಲ್ಯದ ರದ್ದಾದ ನೋಟುಗಳನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. ಡೆಕ್ಕನ್ ಹೆರಾಲ್ಡ್ ಆಂಗ್ಲ ದೈನಿಕ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳನ್ನು ಹೊಂದಿರುವ ಸಂಸ್ಥೆಯ ಹೈದರಾಬಾದ್‌ನ ಬಂಜಾರ ಹಿಲ್ಸ್ ಮತ್ತು ಸಿಕಂದರಾಬಾದ್‌ನಲ್ಲಿರುವ ಕಚೇರಿ ಮತ್ತು ನಿವಾಸಗಳ ಮೇಲೆ ಗುರುವಾರ ದಾಳಿ ನಡೆಸಲಾಗಿದೆ ಎಂದು ಇಡಿ ತಿಳಿಸಿದೆ. ಹಣ ವಂಚನೆ ತಡೆ ಕಾಯ್ದೆಯಡಿ ಡೆಕ್ಕನ್ ಹೆರಾಲ್ಡ್ ಹೋಲ್ಡಿಂಗ್ಸ್ ಲಿ. ಮುಖ್ಯಸ್ಥ ಟಿ.ವೆಂಕಟ್ರಾಮ್ ರೆಡ್ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಟಿ.ವಿನಾಯಕ್ ರವಿ ರೆಡ್ಡಿ ಅವರ ನಿವಾಸ ಮತ್ತು ಕಚೇರಿಗಳಿಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣ ವಂಚನೆಗೆ ಸಾಕ್ಷಿ ಕಲೆ ಹಾಕುವ ಉದ್ದೇಶದಿಂದ ನಡೆಸಲಾಗಿರುವ ದಾಳಿಯಲ್ಲಿ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷಿಗಳು, ಎರಡು ಐಷಾರಾಮಿ ಕಾರುಗಳು ಮತ್ತು ಐದು ಲಕ್ಷ ರೂ. ಮೌಲ್ಯದ ರದ್ದಾದ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೆಕ್ಕನ್ ಕ್ರೋನಿಕಲ್ ಹೋಲ್ಡಿಂಗ್ಸ್ ಲಿ. ಕೆನರ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಿಗೆ ಒಟ್ಟು 2,323 ಕೋಟಿ ರೂ. ಸಾಲ ಬಾಕಿಯಿಟ್ಟಿದೆ ಎಂದು ಇಡಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News